ಜಾಗತಿಕ ತಾಪಮಾನ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ: ಪ್ರಧಾನ ಮಂತ್ರಿ

ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 14ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಪರಿಸರದ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರು ಪ್ಯಾರಿಸ್ ನಲ್ಲಿ...
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
Updated on

ನವದೆಹಲಿ: ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 14ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಪರಿಸರದ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ. ಅವರು ಪ್ಯಾರಿಸ್ ನಲ್ಲಿ ನಡೆಯುವ ಜಾಗತಿಕ ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸಲು ಪ್ಯಾರಿಸ್ ಗೆ ತೆರಳುತ್ತಿದ್ದು, ಅದಕ್ಕೂ ಮುನ್ನ ರೇಡಿಯೋದಲ್ಲಿ ಮಾತನಾಡಿದ್ದಾರೆ.

  • ಇಂದು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ವಿಷಯಗಳು ಚರ್ಚೆಗೆ ಪೂರಕವಾಗಿವೆ. ಜಾಗತಿಕ ತಾಪಮಾನ ಹೆಚ್ಚಳಕ್ಕೆ ಇಂಧನವನ್ನು ಸಂರಕ್ಷಿಸುವುದು ಮೊದಲ ಪರಿಹಾರವಾಗಿದೆ. ಇದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
  • ಡಿಸೆಂಬರ್ 14 ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ. ಇಂಧನವನ್ನು ಸಂರಕ್ಷಿಸಲು ಅನೇಕ ಸರ್ಕಾರಿ ಯೋಜನೆಗಳಿವೆ. ಎಲ್ ಇಡಿ ಬಲ್ಬ್ ಬಳಕೆ ಅವುಗಳಲ್ಲೊಂದಾಗಿದೆ. ಕಾನ್ಪುರದ ನೂರ್ ಜೆಹಾನ್ ನಲ್ಲಿರುವ ನಿವಾಸಿಯೊಬ್ಬರು ಸೌರ ಶಕ್ತಿಯಿಂದ ವಿದ್ಯುತ್ ತಯಾರಿಸಿ ಬಡವರಿಗೆ ವಿದ್ಯುತ್ ಪೂರೈಸುತ್ತಿದ್ದಾರೆ.
  • ಕಲುಷಿತ ಹೊಗೆಯನ್ನು ಹೊರಸೂಸುವುದನ್ನು ತಪ್ಪಿಸಲು ಅಭಿವೃದ್ಧಿ ಹೊಂದಿದ ದೇಶಗಳಿಂದ ಒತ್ತಡವಿದ್ದರೂ ಕೂಡ ಹವಾಮಾನ ನ್ಯಾಯಗಳಿಗೆ ಒತ್ತು ನೀಡುವಂತೆ ಭಾರತದ 25 ಸದಸ್ಯರ ನಿಯೋಗಕ್ಕೆ ಪ್ರಧಾನಿ ಕರೆ.
  •  ಭಾರತದಲ್ಲಿ ಸುಮಾರು 200 ದಶಲಕ್ಷ ಮಂದಿಗೆ ಇನ್ನೂ ಕೂಡ ವಿದ್ಯುತ್ ಸಿಗುತ್ತಿಲ್ಲ.ಕಲ್ಲಿದ್ದಲು ಬಳಕೆಯಲ್ಲಿ ವಿಶ್ವದ ಮೂರನೇ ಅತಿದೊಡ್ಡ ದೇಶವಾದರೂ  ಅದರ ಬಳಕೆಯಲ್ಲಿ ಇತಿಮಿತ ಹಾಕುವುದನ್ನು ಒಪ್ಪುವುದಿಲ್ಲ.
  •  2022ಕ್ಕೆ ನವೀಕರಣ ಮೂಲಗಳಿಂದ 175 ಗಿಗಾವಾಟ್ ವಿದ್ಯುತ್ ನ್ನು ಗಳಿಸುವ ಗುರಿಯನ್ನು ಭಾರತ ಹೊಂದಿದೆ.
  •  ತಮಿಳುನಾಡು ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಉಂಟಾದ ಅವ್ಯಾಹತ ಪ್ರವಾಹದಿಂದ ಸುಮಾರು 170 ಮಂದಿ ಪ್ರಾಣ ಕಳೆದುಕೊಂಡಿದ್ದು ಪ್ರಧಾನಿಯಿಂದ ತೀವ್ರ ಸಂತಾಪ.]
  •  ತಮಿಳುನಾಡಿನಲ್ಲಿ ಉಂಟಾದ ಪ್ರಕೃತಿ ವಿಕೋಪಕ್ಕೆ ಜಾಗತಿಕ ತಾಪಮಾನ ಕಾರಣ. ಇದನ್ನು ತಡೆಗಟ್ಟಲು ದೇಶಗಳು ಪ್ರಯತ್ನಿಸಬೇಕು.
  • ರೈತರನ್ನು ವಿದ್ಯಾವಂತರನ್ನಾಗಿ ಮಾಡಬೇಕಿದೆ. ಅವರನ್ನು ವಿದ್ಯಾವಂತರನ್ನಾಗಿ ಮಾಡಿದರೆ ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು.
  •  ನವೆಂಬರ್ 27 ವಿಶ್ವ ಅಂಗಾಂಗ ದಾನ ದಿನ. ಅಂಗಾಂಗಗಳ ದಾನ ಮಹಾದಾನಗಳಲ್ಲಿ ಒಂದು. ವಿಶೇಷಚೇತನರ ಬಾಳಿಗಾಗಿ ಮತ್ತು ಅಗತ್ಯ ಇರುವವರ ಬಾಳನ್ನು ಕಾಪಾಡಲು ಅಂಗಾಂಗ ದಾನ ಮಾಡಬೇಕು. ವಿಕಲಾಂಗ ಚೇತನರ ಬದುಕು ಸವಾಲು ಮತ್ತು ಎಲ್ಲರಿಗೂ ಸ್ಪೂರ್ತಿ ಎಂದು ಪ್ರಧಾನಿ ಕರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com