ಏಕ್ ಭಾರತ್- ಶ್ರೇಷ್ಠ್ ಭಾರತ್ ಪರಿಕಲ್ಪನೆಗೆ ಯೋಜನೆಯ ರೂಪ ನೀಡಬೇಕೆಂದಿದ್ದೇನೆ: ಪ್ರಧಾನಿ ಮೋದಿ

ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯುತ್ತಿರುವಗಾಲೇ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಒಗ್ಗೂಡಿಸಬಲ್ಲಂತಹ ಯೋಜನೆಯೊಂದನ್ನು ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯುತ್ತಿರುವಗಾಲೇ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಒಗ್ಗೂಡಿಸಬಲ್ಲಂತಹ ಯೋಜನೆಯೊಂದನ್ನು ಜಾರಿಗೆ ತರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ಏಕತೆ ಸಂಸ್ಕೃತಿ ಮುಂದುವರೆಯಬೇಕಿದೆ. ಇದಕ್ಕಾಗಿ ಏಕ್ ಭಾರತ್- ಶ್ರೇಷ್ಠ್ ಭಾರತ್ ಎಂಬ ಪರಿಕಲ್ಪನೆಗೆ ಯೋಜನೆಯ ರೂಪ ನೀಡಬೇಕೆಂದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ತಮ್ಮ ಸಲಹೆ ನೀಡಬಹುದೆಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
"ಅಕ್ಟೋಬರ್ 31 ರಂದು ನಡೆದಿದ್ದ ಸರ್ದಾರ್ ಪಟೇಲ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಒಂದೇ ಭಾರತ ಶ್ರೇಷ್ಠ ಭಾರತದ ಬಗ್ಗೆ ಮಾತನಾಡಿದ್ದೆ. ಈಗ ಅದಕ್ಕೆ ಯೋಜನೆಯ ರೂಪ ನೀಡಬೇಕೆಂದಿದ್ದೇನೆ, ಯೋಜನೆಯ ಸ್ವರೂಪ, ಯೋಜನೆಯಲ್ಲಿ ಜನಸಾಮಾನ್ಯರ ಭಾಗಿತ್ವ ಹಾಗೂ ಲೋಗೋ ಬಗ್ಗೆ ಮೈ ಗೌರ್ನಮೆಂಟ್ ವೆಬ್ ಸೈಟ್ ನಲ್ಲಿ ಸಾರ್ವಜನಿಕರು ಸಲಹೆ ನೀಡಬಹುದೆಂದು ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com