ಆಕಳುಗಳು ಹೆಣ್ಣು ಕರುವಿಗೆ ಮಾತ್ರ ಜನ್ಮ ನೀಡುವಂತೆ ಕೃತಕ ಗರ್ಭಧಾರಣೆ

ಗುಜರಾತ್‌ನ ಆನಂದ್ ನಲ್ಲಿರುವ ಅಮೂಲ್ ಹಾಲು ಉತ್ಪಾದನಾ ಘಟಕಗಳಲ್ಲಿ ಆಕಳುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲಾಗುತ್ತಿದೆ. ಈ ಕೃತಕ ಗರ್ಭಧಾರಣೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಅಹ್ಮದಾಬಾದ್: ದೇಶಾದ್ಯಂತ ಗೋವು ಮತ್ತು ಗೋಮಾಂಸ ಸುದ್ದಿಯಲ್ಲಿರುವ ಹೊತ್ತಲ್ಲೇ,  ದೇಶದ ಅತೀ ದೊಡ್ಡ ಹಾಲು ಉತ್ಪಾದನಾ ಸಂಸ್ಥೆಯಾದ ಅಮೂಲ್ ಹಾಲು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಪ್ರಯೋಗಗಳಿಗೆ ಕೈ ಹಾಕಿದೆ.
ಗುಜರಾತ್‌ನ ಆನಂದ್ ನಲ್ಲಿರುವ ಅಮೂಲ್ ಹಾಲು ಉತ್ಪಾದನಾ ಘಟಕಗಳಲ್ಲಿ ಆಕಳುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲಾಗುತ್ತಿದೆ. ಈ ಕೃತಕ ಗರ್ಭಧಾರಣೆ ಯಾಕೆ ಗೊತ್ತಾ? ಹೆಣ್ಣು ಕರುವಿಗಾಗಿ! 
ಹೌದು ಆಕಳುಗಳು ಕೇವಲ ಹೆಣ್ಣು ಕರುಗಳನ್ನೇ ಹೆರುವಂತೆ ಇಲ್ಲಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. 
ಈ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸುವುದಕ್ಕಾಗಿ 43 ಎಕರೆ ಭೂಮಿಯಲ್ಲಿ ವಿಶೇಷ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಲ್ಯಾಬ್ ನಿರ್ಮಿಸಲಾಗುತ್ತಿದೆ. ಇಲ್ಲಿ ಹೋರಿಗಳಿಂದ ಪಡೆದ ವೀರ್ಯದಿಂದ ಡಿಎನ್‌ಎ ಗಳ ಸಂಖ್ಯೆಯನ್ನು ಏರುಪೇರುಗೊಳಿಸಿ ಹೆಣ್ಣು ಕರು (XX) ಗರ್ಭ ಧರಿಸುವ ವೀರ್ಯವನ್ನಾಗಿ ಮಾಡಲಾಗುತ್ತದೆ. ವಂಶವಾಹಿನಿಗಳಲ್ಲಿ ಈ ರೀತಿಯ ಬದಲಾವಣೆಗಳವನ್ನು ಮಾಡುವ ಕ್ರಿಯೆಗೆ 'flow cytometry' ಎಂದು ಹೇಳಲಾಗುತ್ತದೆ. ಈ ಪ್ರಕ್ರಿಯೆಯನ್ನು  ಅಮೆರಿಕ ಮತ್ತು ಕೆನಾಡಾದಲ್ಲಿ ಮಾಡಲಾಗುತ್ತದೆ.  ಫ್ಲೋರೋಸೆಂಟ್ ಡೈ ಬಳಸಿ ಮಿತವಾದ ಕಿರಣಗಳನ್ನು ಹಾಯಿಸಿ ವೀರ್ಯಗಳನ್ನು ಒಣಗಿಸಿ ಅದರಲ್ಲಿರುವ  ವಂಶವಾಹಿನಿಯನ್ನು ಬೇರ್ಪಡಿಸಲಾಗುತ್ತದೆ.
ಈ ಪ್ರಕ್ರಿಯೆಯಲ್ಲಿ ಶೇ. 30 ರಷ್ಟು ಕಾರ್ಯಗಳು ಪೂರ್ಣಗೊಂಡಿವೆ. ಈಗಾಗಲೇ 2,000 ಹೆಣ್ಣು ಕರುಗಳನ್ನು ಕೃತಕ ಗರ್ಭಧಾರಣೆ ಮೂಲಕ ಪಡೆಯಲಾಗಿದೆ ಎಂದು ಕೈರಾ ಜಿಲ್ಲಾ ಕಾರ್ಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಯೂನಿಯನ್ ಲಿಮಿಟೆಡ್  ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ರತ್ನಂ ಹೇಳಿದ್ದಾರೆ.
ಆದಾಗ್ಯೂ, ಈ ಪ್ರಕ್ರಿಯೆಗೆ ವೈಜ್ಞಾನಿಕ ಸಹಾಯವನ್ನು ನೀಡಿ ಸಹಕರಿಸುತ್ತಿರುವ ಸಂಸ್ಥೆಯ ಹೆಸರು ಹೇಳಲು ನಿರಾಕರಿಸಿರುವ ರತ್ನಂ, ಕೃತಕ ಗರ್ಭಧಾರಣೆ ಮೂಲಕ ಹೆಣ್ಣು ಕರುಗಳನ್ನು ಪಡೆಯುವ ಪ್ರಕ್ರಿಯೆ ಯಶಸ್ವಿಯಾದರೆ ಕೋಣಗಳ ಮೇಲೂ ಇಂಥಾ ಪ್ರಯೋಗ ಮಾಡಲಾಗುವುದು ಎಂದಿದ್ದಾರೆ.
ದೇಶದಲ್ಲಿ ಹಾಲು ಉತ್ಪಾದನೆ ಜಾಸ್ತಿ ಮಾಡುವುದಕ್ಕಾಗಿ ಆಕಳುಗಳು ಹೆಣ್ಣು ಕರುಗಳನ್ನು ಮಾತ್ರ ಹೆರುವಂತೆ ಮಾಡಲಾಗುತ್ತದೆ. ಆಕಳುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಿದನಂತರ ಅವುಗಳನ್ನು ಅವುಗಳ ಮಾಲೀಕರಿಗೆ ನೀಡಲಾಗುವುದು ಎಂದು ರತ್ನಂ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com