ಮರಾಠಿ ಪತ್ರಿಕೆ ಲೋಕಮತ್
ದೇಶ
ಲೋಕಮತ್ ಪತ್ರಿಕಾ ಕಚೇರಿ ಮೇಲೆ ಮುಸ್ಲಿಂ ಯುವಕರ ಗುಂಪಿನಿಂದ ದಾಳಿ
ಆಕ್ಷೇಪಾರ್ಹ ಕಾರ್ಟೂನ್ ಮತ್ತು ಲೇಖನ ಪ್ರಕಟಿಸಿದ್ದಕ್ಕಾಗಿ ಮುಸ್ಲಿಂ ಯುವಕರ ಗುಂಪೊಂದು ಮಹಾರಾಷ್ಟ್ರದ ಖ್ಯಾತ ಪತ್ರಿಕೆ ಲೋಕಮತ್ ...
ಮುಂಬೈ: ಆಕ್ಷೇಪಾರ್ಹ ಕಾರ್ಟೂನ್ ಮತ್ತು ಲೇಖನ ಪ್ರಕಟಿಸಿದ್ದಕ್ಕಾಗಿ ಮುಸ್ಲಿಂ ಯುವಕರ ಗುಂಪೊಂದು ಮಹಾರಾಷ್ಟ್ರದ ಖ್ಯಾತ ಮರಾಠಿ ಪತ್ರಿಕೆ ಲೋಕಮತ್ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದೆ.
ಭಾನುವಾರ ಮುಸ್ಲಿಂ ಯುವಕರ ಗುಂಪೊಂದು ಕಚೇರಿ ಮೇಲೆ ದಾಳಿ ನಡೆಸಿ, ಪತ್ರಿಕೆಗಳನ್ನು ಸುಟ್ಟು ಹಾಕಿದೆ.
ಲೋಕಮತ್ ತಮ್ಮ ಭಾನುವಾರದ ಪುರವಣಿ ಮಂಥನ್ ದಲ್ಲಿ ಇಸಿಸ್ ಚಾ ಪೈಸಾ (ಇಸಿಸ್‌ನ ಹಣ) ಎಂಬ ಲೇಖನ ಪ್ರಕಟಿಸಿತ್ತು. ಈ ಲೇಖನ ಮತ್ತು ಅದರಲ್ಲಿ ಬಳಸಿರುವ ಕಾರ್ಟೂನ್ ಆಕ್ಷೇಪಾರ್ಹವಾಗಿದೆ ಎಂದು ಮುಸ್ಲಿಂ ಯುವಕರು ರೊಚ್ಚಿಗೆದ್ದಿದ್ದರು.
ಇದೀಗ ಪತ್ರಿಕೆಯ ಸಂಪಾದಕರು ಜನತೆಯ ಕ್ಷಮೆಯಾಚಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಆದಾಗ್ಯೂ, ಘಟನೆಯ ಹಿನ್ನಲೆಯಲ್ಲಿ ಕಚೇರಿಯ ಸುತ್ತಲೂ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.

