400 ವರ್ಷಗಳ ಸಂಪ್ರದಾಯಕ್ಕೆ ಕೊನೆ ಹಾಡಿ, ಶನಿ ದೇವರಿಗೆ ಪೂಜೆ ಸಲ್ಲಿಸಿಯೇಬಿಟ್ಟಳು!

400 ವರ್ಷಗಳ ಸಂಪ್ರದಾಯ ಮುರಿದು ಶನಿ ದೇಗುಲದ ಗರ್ಭ ಗುಡಿಯಲ್ಲಿ ಮಹಿಳೆಯರು ಪೂಜೆ...
400 ವರ್ಷಗಳ ಸಂಪ್ರದಾಯ ಮುರಿದು ಶನಿ ದೇಗುಲದ ಗರ್ಭ ಗುಡಿಯಲ್ಲಿ ಮಹಿಳೆ ಪೂಜೆ ಸಲ್ಲಿಸುತ್ತಿರುವುದು- ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
400 ವರ್ಷಗಳ ಸಂಪ್ರದಾಯ ಮುರಿದು ಶನಿ ದೇಗುಲದ ಗರ್ಭ ಗುಡಿಯಲ್ಲಿ ಮಹಿಳೆ ಪೂಜೆ ಸಲ್ಲಿಸುತ್ತಿರುವುದು- ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಮುಂಬೈ: 400 ವರ್ಷಗಳ ಸಂಪ್ರದಾಯ ಮುರಿದು ಶನಿ ದೇಗುಲದ ಗರ್ಭ ಗುಡಿಯಲ್ಲಿ ಮಹಿಳೆಯರು ಪೂಜೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಅಹ್ಮದ್‍ನಗರ ಜಿಲ್ಲೆಯ ಗ್ರಾಮವೊಂದರಲ್ಲಿರುವ ಶನಿ ಶಿಂಗನಾಪುರ ದೇಗುಲದಲ್ಲಿ ಮಹಿಳೆಯರೇ ಗರ್ಭಗುಡಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಇದರಿಂದ ಕ್ರುದ್ಧರಾದ ಗ್ರಾಮಸ್ಥರು ಭಾನುವಾರ ದೇಗುಲ, ಶನಿ ವಿಗ್ರಹವನ್ನು ಹಾಲಿನ ಮೂಲಕ ಶುದ್ಧಿಕರಿಸಿದ್ದಾರೆ. ಘಟನೆಯಿಂದ ಆಘಾತಗೊಂಡಿರುವ ಆಡಳಿತ ಮಂಡಳಿ 7 ಭದ್ರತಾ ಸಿಬ್ಬಂದಿಯನ್ನು ಅಮಾನತು ಮಾಡಿದೆ. 
ಏನಿದು ಘಟನೆ?: ಅಹ್ಮದ್‍ನಗರ ಜಿಲ್ಲೆಯ ಪ್ರಸಿದ್ಧ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಇದೆ. ಆದರೆ ಗರ್ಭಗುಡಿ ಆವರಣದೊಳಗೆ ಪ್ರವೇಶವಿದ್ದಿಲ್ಲ. ಈ ಬಗ್ಗೆ ಹಿಂದೆಯೂ ಸಾಕಷ್ಟು ವಾದ ವಿವಾದ, ಪ್ರತಿಭಟನೆ ಆಗ್ರಹಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಪುರುಷ ಭಕ್ತರಿಗೂ ಗರ್ಭಗುಡಿ ಪ್ರವೇಶ ನಿರಾಕರಿಸಲಾಗಿತ್ತು. 
ನಿಯಮ ಪಾಲನೆಗಾಗಿ ಗರ್ಭಗುಡಿಯ ಸುತ್ತಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೆ, ಶನಿವಾರ ಯುವತಿಯೊಬ್ಬಳು ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ, ಗರ್ಭಗೃಹಕ್ಕೆ ಕರೆದೊಯ್ಯುವ 9 ಮೆಟ್ಟಿಲುಗಳನ್ನು ಏರಿ, ಶನಿ ದೇವರಿಗೆ ದೀಪದೆಣ್ಣೆ ಸಮರ್ಪಿಸಿ ಪೂಜೆ ಸಲ್ಲಿಸಿದ್ದಾಳೆ. ನಂತರ, ಬಂದಷ್ಟೇ ಸುಲಭ ವಾಗಿ ಮೆಟ್ಟಿಲಿಳಿದು ಜನಜಂಗುಳಿ ಸೇರಿಕೊಂಡಿದ್ದಾಳೆ.
ಸ್ವಾಗತ: ನಿಯಮ ಮುರಿದ ಅನಾಮಧೇಯ ಯುವತಿ ಯ ಕ್ರಮವನ್ನು ಹಲವು ಸಂಘಟನೆಗಳು ಸ್ವಾಗತಿಸಿವೆ. `ಆಕೆ ಮಾಡಿದ ಕೆಲಸಕ್ಕಾಗಿ ಯುವತಿಯನ್ನು ಸನ್ಮಾನಿಸಬೇಕು. ಈ ಪ್ರಕರಣವನ್ನು ವಿಧಾನಸಭೆಯ ಅಧಿವೇಶನ ದಲ್ಲಿ ಪ್ರಸ್ತಾಪಿಸಲಾಗುವುದು' ಎಂದು ಸೊಲ್ಲಾಪುರದ ಕಾಂಗ್ರೆಸ್ ಶಾಸಕಿ ಹಾಗೂ ಕೇಂದ್ರ ಮಾಜಿ ಗೃಹ ಸಚಿವ ಸುಶೀಲ್‍ಕುಮಾರ್ ಶಿಂದೆ ಪುತ್ರಿ ಪ್ರಣಿತಿ ಶಿಂಧೆ ಹೇಳಿದ್ದಾರೆ. 
ಶನಿ ಶಿಂಗನಾಪುರ ದೇಗುಲಕ್ಕೆ ಎಲ್ಲಿಯೂ ಬಾಗಿಲುಗಳಿಲ್ಲ. ಇಡೀ ಊರು ಇದೇ ಮಾದರಿ ಅನುಸರಿಸಿ ದ್ದು, ಯಾವ ಮನೆಗಳೂ ಬಾಗಿಲುಗಳನ್ನು ಹೊಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com