ಎಎಪಿ ನಾಯಕರಿಂದ ಜನಲೋಕಪಾಲ್ ಕುರಿತು ಅಣ್ಣಾ ಹಜಾರೆಗೆ ಮಾಹಿತಿ

ಎಎಪಿ ನಾಯಕರಾದ ಕುಮಾರ್ ವಿಶ್ವಾಸ್ ಹಾಗೂ ಸಂಜಯ್ ಸಿಂಗ್ ಅವರು ಮಂಗಳವಾರ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ...
ಅರವಿಂದ್ ಕೇಜ್ರಿವಾಲ್, ಅಣ್ಣಾ ಹಜಾರೆ, ಮನಿಶ್ ಸಿಸೋಡಿಯಾ (ಸಂಗ್ರಹ ಚಿತ್ರ)
ಅರವಿಂದ್ ಕೇಜ್ರಿವಾಲ್, ಅಣ್ಣಾ ಹಜಾರೆ, ಮನಿಶ್ ಸಿಸೋಡಿಯಾ (ಸಂಗ್ರಹ ಚಿತ್ರ)

ರಾಳೆಗಣ್‌ಸಿದ್ಧಿ: ಎಎಪಿ ನಾಯಕರಾದ ಕುಮಾರ್ ವಿಶ್ವಾಸ್ ಹಾಗೂ ಸಂಜಯ್ ಸಿಂಗ್ ಅವರು ಮಂಗಳವಾರ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ, ನಿನ್ನೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮಂಡಿಸಿದ್ದ ಜನಲೋಕಪಾಲ್ ವಿಧೇಯಕದ ಕುರಿತು ಮಾಹಿತಿ ನೀಡಿದರು.

ಮಹಾರಾಷ್ಟ್ರದ ರಾಳೆಗಣ್‌ಸಿದ್ಧಿಯಲ್ಲಿ ಹಜಾರೆ ಅವರನ್ನು ಭೇಟಿ ಮಾಡಿದ ಎಎಪಿ ನಾಯಕರು, ವಿಧೇಯಕದ ವೈಶಿಷ್ಟ್ಯಗಳ ಕುರಿತು ಚರ್ಚಿಸಿದರು ಎಂದು ಹಜಾರೆ ಅವರ ಆಪ್ತ ದತ್ತಾ ಅವರಿ ಅವರು ದೂರವಾಣಿ ಮೂಲಕ ತಿಳಿಸಿದ್ದಾರೆ.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ನೀಡಿದ್ದ ಭರವಸೆಗಳ ಪೈಕಿ ಜನಲೋಕಪಾಲ್ ಜಾರಿಯೂ ಒಂದಾಗಿದ್ದು, ಇದು 2011ರ ಮೂಲ ವಿಧೇಯಕವನ್ನು ಹೋಲುತ್ತದೆ.

ಉದ್ದೇಶಿಸಿತ ಭ್ರಷ್ಟಾಚಾರ ವಿರೋಧಿ ಕಾನೂನು ಕೇಂದ್ರ ಸರ್ಕಾರದ ನೌಕರರು ಸೇರಿದಂತೆ ರಾಷ್ಟ್ರರಾಜಧಾನಿಯಲ್ಲಿ ಯಾವುದೇ ಅಧಿಕಾರಿ ಹಾಗೂ ಸಾರ್ವನಿಕ ಜೀವನದಲ್ಲಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com