ಮತ್ತೆ ಏರಿತು ಸಬ್ಸಿಡಿರಹಿತ ಎಲ್​ಪಿಜಿ ಸಿಲಿಂಡರ್ ದರ

ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್​ಪಿಜಿ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಿದ್ದು, ಪ್ರತೀ ಸಿಲಿಂಡರ್ ಮೇಲೆ 61.50 ರೂ. ಹೆಚ್ಚಳವಾಗಿದೆ....
ಎಲ್ ಪಿ ಜಿ ಸಿಲಿಂಡರ್
ಎಲ್ ಪಿ ಜಿ ಸಿಲಿಂಡರ್

ನವದೆಹಲಿ: ತೈಲ ಕಂಪನಿಗಳು ಸಬ್ಸಿಡಿ ರಹಿತ ಎಲ್​ಪಿಜಿ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಿದ್ದು, ಪ್ರತೀ ಸಿಲಿಂಡರ್ ಮೇಲೆ 61.50 ರೂ. ಹೆಚ್ಚಳವಾಗಿದೆ. ಜತೆಗೆ ವಿಮಾನ ಇಂಧನ ಬೆಲೆ ಶೇ.1.2ರಷ್ಟು ಕಡಿಮೆಯಾಗಿದೆ.

ಅನುದಾನ ರಹಿತ 14.2 ಕೆಜಿಯ ಸಿಲಿಂಡರ್ ಅನಿಲದ ಬೆಲೆ 606.50 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಸೋಮವಾರದ ವರೆಗೆ 545 ರೂ. ಇತ್ತು. ಕಳೆದ ನವೆಂಬರ್ 1ರಂದು 27.5 ರೂ. ಹೆಚ್ಚಾಗಿತ್ತು. ಒಂದೇ ತಿಂಗಳಲ್ಲಿ ಸಿಲಿಂಡರ್ ಬೆಲೆ 89 ರೂ. ಹೆಚ್ಚಳವಾಗಿರುವುದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

ದೆಹಲಿಯಲ್ಲಿ ಅನುದಾನಿತ ಎಲ್​ಪಿಜಿ ಅನಿಲ ಸಿಲಿಂಡರ್ ಒಂದರ ಬೆಲೆ 417.82 ರೂ. ಅನುದಾನಿತ ಅಡುಗೆ ಅನಿಲದ ಬೆಲೆಯೂ 127.18-188.68 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com