ಒಡಕುಂಟುಮಾಡುವ ಚಿಂತನೆಗಳನ್ನು ತೆಗೆದುಹಾಕಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಅಹಮದಾಬಾದ್: ಭಾರತದ ನಿಜವಾದ ಮಲಿನ ರಸ್ತೆಗಳ ಮೇಲಿಲ್ಲ ಬದಲಾಗಿ ನಮ್ಮ ಮನಸ್ಸು ಹಾಗೂ ಸಮಾಜವನ್ನು ಒಡೆಯುವ ದೃಷ್ಟಿಕೋನಗಳನ್ನು ತೊಲಗಿಸಲು ಸಿದ್ಧವಿಲ್ಲದ ಮನಸ್ಥಿತಿಯಲ್ಲಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಗುಜರಾತ್ ಭೇಟಿಯಲ್ಲಿರುವ ಪ್ರಣಬ್ ಮುಖರ್ಜಿ, ಸಬರ್ ಮತಿ ಆಶ್ರಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದು, ಭೇದ ಭಾವದ ಆಲೋಚನೆಗಳನ್ನು ಬಿಟ್ಟು ಮನಸ್ಸನ್ನು ಚೊಕ್ಕಗೊಳಿಸುವುದಕ್ಕೆ ದೇಶದ ಜನತೆಗೆ ಕರೆ ನೀಡಿದ್ದಾರೆ. ಸಮಗ್ರತೆಗೆ ಮಹಾತ್ಮಾ ಗಾಂಧಿ ಅವರ ದೃಷ್ಟಿಕೋನವನ್ನು ಉಲ್ಲೇಖಿಸಿರುವ ಪ್ರಣಬ್ ಮುಖರ್ಜಿ, ಭಾರತ ಪ್ರತಿಯೊಂದು ವರ್ಗವು ಸಮಾನತೆಯಿಂದ ಬದುಕಲು ಸಾಧ್ಯವಿರುವ ಸಮಗ್ರ ರಾಷ್ಟ್ರವಾಗಿರಬೇಕು ಎಂದು ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಪ್ರತಿ ದಿನವೂ ನಮ್ಮ ಸುತ್ತಮುತ್ತಲ ಪ್ರದೇಶದಲ್ಲಿ ಹಿಂಸಾಚಾರ ನಡೆದಿರುವ ಬಗ್ಗೆ ಕೇಳುತ್ತಿದ್ದೇವೆ. ಹಿಂಸೆಯನ್ನು ಎದುರಿಸುವಾಗ ನಾವು ಅಹಿಂಸಾ ಮಾರ್ಗವನ್ನು ಮರೆಯಬಾರದು ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ. ಅಹಿಂಸೆ ಎನ್ನುವುದು ನಕಾರಾತ್ಮಕ ಶಕ್ತಿಯಲ್ಲ, ಅಹಿಂಸೆಯಿಂದ ಮಾತ್ರ ಎಲ್ಲರ ಒಳಗೊಳ್ಳುವಿಕೆ ಸಾಧ್ಯವಾಗುತ್ತದೆ ಎಂದು ಪ್ರಣಬ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ