ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಹಂಕಾರಿ: ಪ್ರಧಾನಿ ಮೋದಿ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತುಂಬಾ ಅಹಂಕಾರಿ ಮನುಷ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 
ಬಂಕಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತುಂಬಾ ಅಹಂಕಾರಿ ಮನುಷ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 
ಬಿಹಾರದ ಬಂಕಾದಲ್ಲಿ ಮೊದಲ ಚುನಾವಣಾ ಪ್ರಚಾರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಹಾರದ ಯುವ ಜನರಿಗೆ ಉದ್ಯೋಗ ಸಿಗಬೇಕು. ರೈತರು, ಮಹಿಳೆಯರಿಗೆ ಸಹಕಾರಿಯಾಗಬೇಕು ಎಂಬುದು ನನ್ನ ಉದ್ದೇಶ. ಬಿಹಾರದ ಅಭಿವೃದ್ಧಿಗಾಗಿ ನೀವು ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದರು.
ಕೆಲವರು ನಾನು ಬಿಹಾರಕ್ಕೆ 1.65 ಲಕ್ಷ ಕೋಟಿ ರೂಪಾಯಿ ಘೋಷಣೆ ಮಾಡಿರುವುದನ್ನು ಪ್ರಶ್ನಿಸಿದ್ದಾರೆ. ಈ ಹಣ ನಿಜಕ್ಕೂ ರಾಜ್ಯಕ್ಕೆ ಬರುತ್ತೋ ಅಥವಾ ಇಲ್ಲವೋ ಎಂದು ಕೇಳುತ್ತಾರೆ. ಹೋಗಲಿ ನಮ್ಮ ಸರ್ಕಾರ ಬಿಡುಗಡೆ ಮಾಡಿದ ಒಂದು ರೂಪಾಯಿಯಾದರೂ ನಿಮಗೆ ತಲುಪುತ್ತದೆಯೇ? ಎಂದು ಪ್ರಶ್ನಿಸಿದರು.
ಒಂದು ವೇಳೆ ನಾನು ಹಣವನ್ನು(ನಿತೀಶ್) ಕೊಟ್ಟರೂ ಸಹ ಸೊಕ್ಕಿನ ಮನುಷ್ಯ ಅದನ್ನು ವಾಪಸ್ ಮಾಡುತ್ತಾರೆ. ಹಾಗಾಗಿ ನಾನು ಆ ಬಗ್ಗೆ ಚಿಂತಿತನಾಗಿದ್ದೇನೆ. ನಾನು ಈ 1.65 ಲಕ್ಷ ಕೋಟಿ ರೂಪಾಯಿ ಹಣ ರಾಜ್ಯದ ಅಭಿವೃದ್ಧಿಗೆ ಕೊಟ್ಟರೆ. ಆಗ ನಿತೀಶ್ ಕುಮಾರ್, ಈ ಹಣ ಮೋದಿ ಕೊಟ್ಟಿದ್ದು, ಹಾಗಾಗಿ ಆ ಹಣವನ್ನು ನಾನು ವಾಪಸ್ ಕೊಟ್ಟಿದ್ದೇನೆ ಎಂದು ಘೋಷಿಸುತ್ತಾರೆ. ಹಾಗಾಗಿ ನಾನು ಆ ವ್ಯಕ್ತಿಯನ್ನು ನಂಬುವುದಿಲ್ಲ ಎಂದು ಮೋದಿ ಚಾಟಿ ಬೀಸಿದರು.
ಜಿತನ್ ರಾಂ ಮಾಂಜಿ ಅವರಿಗೆ ಎಸಗಿದ ದ್ರೋಹದ ನಂತರ ನಿತೀಶ್ ಅವರನ್ನು ಯಾರೂ ನಂಬುವುದಿಲ್ಲ. ಬಿಹಾರದ ಜನರೂ ಅವರನ್ನು ನಂಬಲಾರರು ಎಂದರು. ಆ ಕಾರಣಕ್ಕಾಗಿ ನಿಮಗೆ ಅಭಿವೃದ್ಧಿ ಪರ, ಸುಭದ್ರ ಸರ್ಕಾರ ಬೇಕಿದಾರೆ ಬಿಜೆಪಿಗೆ ಮತ ನೀಡಿ ಎಂದು ಮೋದಿ ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com