ಲಾಲ್ ಬಹದ್ದೂರ್ ಶಾಸ್ತ್ರೀಗೆ ನಮನ ಸಲ್ಲಿಸಿದ ಮೋದಿ

ದೇಶದೆಲ್ಲೆಡೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ 111ನೇ ಜನ್ಮದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಾಲ್ ಬಹದ್ದೂರ್ ಶಾಸ್ತ್ರೀಯವರಿಗೆ ಗೌರವ ನಮನ...
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ (ಸಂಗ್ರಹ ಚಿತ್ರ)
Updated on

ನವದೆಹಲಿ: ದೇಶದೆಲ್ಲೆಡೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ 111ನೇ ಜನ್ಮದಿನಾಚರಣೆಯನ್ನು  ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಾಲ್ ಬಹದ್ದೂರ್ ಶಾಸ್ತ್ರೀಯವರಿಗೆ ಗೌರವ ನಮನವನ್ನು ಸೂಚಿಸಿದ್ದು,ಶಾಸ್ತ್ರೀಯವರ 'ಜೈವಾನ್ ಜೈ ಕಿಸಾನ್' ನಮ್ಮೆಲ್ಲರಿಗೂ ಪ್ರೇರಣೆ ಎಂದು ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಹೆಮ್ಮೆಯ ಪುತ್ರ. ಅವರಿಗೆ ಜನ್ಮದಿನಕ್ಕೆ ನನ್ನ ನಮನಗಳು. ಶಾಸ್ತ್ರೀಯವರು ತಮ್ಮ ಸರಳ ಹಾಗೂ ಸಮಗ್ರತೆಯಿಂದ ಎಲ್ಲರ ಮನವನ್ನು ಗೆದ್ದಿದ್ದರು. ಕಠಿಣ ಸಂದರ್ಭಗಳಲ್ಲಿ ಅವರು ನೀಡಿದ್ದ ನಾಯಕತ್ವ ನಮ್ಮ ದೇಶದ ದೊಡ್ಡ ಆಸ್ದಿಯಾಗಿದೆ. ಇಂದು ರೈತರಿಗಾಗಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಲಾಲ್ ಬಹದ್ದೂರ್ ಅವರ 'ಜೈವಾನ್ ಜೈ ಕಿಸಾನ್; ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ಲಾಲ್ ಬಹದ್ದೂರ್ ಶಾಸ್ತ್ರೀಯವರು ಭಾರತದ ಎರಡನೇ ಪ್ರಧಾನಿಯಾಗಿದ್ದು, ಜೂನ್ 9, 1964 ರಿಂದ ಜನವರಿ 11, 1966ರ ಅವಧಿಯವರೆಗೂ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com