ಪಾಕ್ ಹಿಂದೂಗಳ ಪರಿಸ್ಥಿತಿ ಚಿಂತಾಜನಕ: ಅಮೆರಿಕ ಕಾನೂನು ತಜ್ಞರ ಅಭಿಮತ

ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಮೆರಿಕದ ಪ್ರಮುಖ...
ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಸಿಂಧ್ ಪ್ರಾಂತ್ಯದ ಹಿಂದೂ ಜನರು(ಸಂಗ್ರಹ ಚಿತ್ರ)
ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವ ಸಿಂಧ್ ಪ್ರಾಂತ್ಯದ ಹಿಂದೂ ಜನರು(ಸಂಗ್ರಹ ಚಿತ್ರ)

ವಾಷಿಂಗ್ಟನ್: ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಪರಿಸ್ಥಿತಿ ಹದಗೆಟ್ಟಿದೆ ಎಂದು ಅಮೆರಿಕದ ಪ್ರಮುಖ ಕಾನೂನು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.ಸಿಂಧು ಪ್ರಾಂತ್ಯದಲ್ಲಿ ವಾಸಿಸುತ್ತಿರುವ ಹಿಂದೂ ಸಮುದಾಯದವರು ನಿರಂತರವಾಗಿ ಭಯದ ವಾತಾವರಣದಲ್ಲಿಯೇ ಜೀವಿಸುತ್ತಿದ್ದಾರೆ. ಅಲ್ಲಿ ಹಿಂದೂ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಮುಸಲ್ಮಾನ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಅಮೆರಿಕ ಕಾಂಗ್ರೆಸ್ ನಲ್ಲಿ ಕಳೆದ ವಾರ ಹಮ್ಮಿಕೊಂಡಿದ್ದ ಸಿಂಧ್ ಪ್ರಾಂತ್ಯದಲ್ಲಿ ಮಾನವ ಹಕ್ಕುಗಳ ಸ್ಥಿತಿಗತಿ ಕುರಿತ ಚರ್ಚೆ ವೇಳೆ ಕಾಂಗ್ರೆಸ್ ಸದಸ್ಯೆ ಲೊರೆಟ್ಟಾ ಸಂಚೆಜ್ ಹೇಳಿದ್ದಾರೆ.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ ನಲ್ಲಿ ಸಿಂಧ್ ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಸಂಚೆಜ್, ಸಿಂಧ್ ಪ್ರಾಂತ್ಯ ಈಗ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ರಾಜಕೀಯ ಕಾರ್ಯಕರ್ತರ ಮತ್ತು ಭಿನ್ನಮತೀಯರ ಅಪಹರಣ, ಹತ್ಯೆ ನಡೆಯುತ್ತಿದೆ. ಹಿಂದೂ ಧರ್ಮದ ಮಹಿಳೆಯರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಇಸ್ಲಾಂ ಉಗ್ರಗಾಮಿಗಳ ಸಂಖ್ಯೆ ಸಿಂಧಿ ಪ್ರಾಂತ್ಯದಲ್ಲಿ ಹೆಚ್ಚಾಗುತ್ತಿದೆ ಎಂದು ಮತ್ತೊಬ್ಬ ಅಮೆರಿಕದ ರಾಜಕೀಯ ನಾಯಕ ಬ್ರಾಡ್ ಶರ್ಮನ್ ಹೇಳಿದ್ದಾರೆ.ಅಮೆರಿಕ ಮತ್ತು ಸಿಂಧ್ ಪ್ರಾಂತ್ಯದ ಜನರ ನಡುವೆ ಬಾಂಧವ್ಯ ಬೆಳೆಸಲು ನಾವು ಪ್ರಯತ್ನಿಸುತ್ತಿದ್ದೇವೆ. ಸಿಂಧ್ ಪ್ರಾಂತ್ಯದ ಜನರೊಂದಿಗೆ ಸಿಂಧಿ ಭಾಷೆಯಲ್ಲೇ ವ್ಯವಹರಿಸಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

ನ್ಯೂಯಾರ್ಕ್ ಮೂಲದ ಪತ್ರಕರ್ತ ಮತ್ತು ಮಾನವ ಹಕ್ಕು ಹೋರಾಟಗಾರ ಹಸನ್ ಮುಜತಾಬಾ ಮಾತನಾಡಿ, ಸಿಂಧ್ ಭಾಗದಲ್ಲಿ ಮದ್ರಸಾಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆ ಭಾಗದ ಜನರಿಗೆ ಸರಿಯಾಗಿ ಬದುಕುವ ಹಕ್ಕು ಇಲ್ಲದಾಗಿದೆ. ವಾಷಿಂಗ್ಟನ್ ಮೂಲದ ಸಿಂಧಿ ಫೌಂಡೇಷನ್ ನ ಕಾರ್ಯಕಾರಿ ನಿರ್ದೇಶಕ ಸೂಫಿ ಲಗರಿ ಮಾತನಾಡಿ, ಪಾಕಿಸ್ತಾನದಲ್ಲಿ ಸಿಂಧ್ ಪ್ರಾಂತ್ಯದ ಜನರಿಗೆ ಉದ್ಯೋಗದಲ್ಲಿ ಪ್ರಾತಿನಿಧ್ಯ ನೀಡುವುದು, ಮೀಸಲಾತಿ ನೀಡುವುದು ಮತ್ತು ಅವರ ಭಾಷೆಯ ರಕ್ಷಣೆಗಾಗಿ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com