ಮಹಾರಾಷ್ಟ್ರ ಹುಲಿ ಸಂರಕ್ಷಣಾ ರಾಯಭಾರಿಯಾಗಿ ಅಮಿತಾಬ್ ಬಚ್ಚನ್

ನ್ಯಜೀವಿ ವಾರ ಆಚರಣೆ ಅಂಗವಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಹಾರಾಷ್ಟ್ರದ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ನ ಹುಲಿ ಸಂರಕ್ಷಣಾ ರಾಯಭಾರಿಯಾಗಿ....
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್
Updated on: 

ಮುಂಬಯಿ: ವನ್ಯಜೀವಿ ವಾರ ಆಚರಣೆ ಅಂಗವಾಗಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮಹಾರಾಷ್ಟ್ರದ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ನ ಹುಲಿ ಸಂರಕ್ಷಣಾ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ನಾಳೆ ವನ್ಯಜೀವಿ ವಾರದ ಆಚರಣೆ ಆರಂಭವಾಗಲಿದ್ದು ಇದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್ ನಲ್ಲಿ ಸಫಾರಿಗಾಗಿ ಎಂರಡು ಹೊಸ ಬಸ್ ಗಳನ್ನು ಅಮಿತಾಬ್ ಬಚ್ಚನ್ ಉದ್ಘಾಟಿಸಲಿದ್ದಾರೆ.  ಮಹಾರಾಷ್ಟ್ರ ಹಣಕಾಸು ಸಚಿವ, ಅರಣ್ಯ ಸಚಿವರು ಸೇರಿದಂತೆ ಹಲವು ಮಂತ್ರಿಗಳು ಭಾಗವಹಿಸಲಿದ್ದಾರೆ.

ಪ್ರತಿವರ್ಷ ಅಕ್ಟೋಬರ್ 2 ರಿಂದ 8ನೇ ತಾರೀಖಿನವರೆಗೆ ದೇಶಾದ್ಯಂತ ವನ್ಯಜೀವಿ ವಾರ ಆಚರಿಸಲಾಗುತ್ತಿದೆ.   ಈ ಭಾರಿ ಪ್ರಥಮ ಬಾರಿಗೆ ಅಮಿತಾಬ್ ಬಚ್ಚನ್ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಆಗಸ್ಟ್ 11 ರಂದು ಬಾಲಿವುಡ್ ಮೆಗಾ ಸ್ಚಾರ್ ಅವರನ್ನು ಹುಲಿ ಸಂರಕ್ಷಿಸಿ ಅಭಿಯಾನದ ರಾಯಭಾರಿಯಾಗಿ ನೇಮಿಸಲಾಗಿತ್ತು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com