ದಾದ್ರಿ ಪ್ರಕರಣ: ಹಿಂದೂ ಗೆಳೆಯನಿಗೆ ಕೊನೆಯ ಕರೆ ಮಾಡಿದ್ದ ಅಖ್ಲಾಕ್

ಗುಂಪೊಂದು ಮನೆಯೊಳಗೆ ನುಗ್ಗಿ ದಾಂದಲೆ ನಡೆಸುವಾಗ ದಾದ್ರಿಯ ಬಿಸಡಾಗಾಂವ್ ನಿವಾಸ್ ಮೊಹಮ್ಮದ್ ಅಖ್ಲಾಕ್ ತನ್ನ...
ಅಖ್ಲಾಕ್ ಸಂಬಂಧಿಕರು(ಅಖ್ಲಾಕ್ ಭಾವಚಿತ್ರ- ಬಲ ತುದಿಯಲ್ಲಿ)
ಅಖ್ಲಾಕ್ ಸಂಬಂಧಿಕರು(ಅಖ್ಲಾಕ್ ಭಾವಚಿತ್ರ- ಬಲ ತುದಿಯಲ್ಲಿ)
ಬಿಸಡಾಗಾಂವ್: ಗುಂಪೊಂದು ಮನೆಯೊಳಗೆ ನುಗ್ಗಿ ದಾಂದಲೆ ನಡೆಸುವಾಗ ದಾದ್ರಿಯ ಬಿಸಡಾಗಾಂವ್ ನಿವಾಸ್ ಮೊಹಮ್ಮದ್ ಅಖ್ಲಾಕ್ ತನ್ನ ಬಾಲ್ಯದ ಗೆಳೆಯ ಮನೋಜ್ ಸಿಸೋಡಿಯಾಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. 
ಹಿಂದೂ ಧರ್ಮದ ಮನೋಜ್ ಸಿಸೋಡಿಯಾ ಅಖ್ಲಾಕ್ ಗೆ ಬಾಲ್ಯದ ಗೆಳೆಯನಾಗಿದ್ದರು. ಗುಂಪೊಂದು ತಮ್ಮ ಮೇಲೆ ಹಲ್ಲೆ ಮಾಡುತ್ತಿರುವ ವಿಷಯವನ್ನು ಅಖ್ಲಾಕ್ ತನ್ನ ಗೆಳೆಯನಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣ ಗೆಳೆಯನ ಪ್ರಾಣ ಉಳಿಸಲೆಂದು ಮನೋಜ್ ಸಿಸೋಡಿಯಾ ಪೊಲೀಸರೊಂದಿಗೆ ಅಖ್ಲಾಕ್ ಮನೆಗೆ ಬಂದಿದ್ದಾರೆ. ಆದರೆ, ಅಷ್ಟರಲ್ಲಿ ಅಖ್ಲಾಕ್ ಪ್ರಾಣ ಬಿಟ್ಟಿದ್ದರು. ಮಗ ನರಳಾಡುತ್ತಿದ್ದ ದೃಶ್ಯ ಕಂಡುಬಂದಿದೆ. ಕರೆ ಮಾಡಿದ 15 ನಿಮಿಷದೊರಳಗಾಗಿ ಸಿಸೋಡಿಯಾ ಮತ್ತು ಪೊಲೀಸರು ಅಖ್ಲಾಕ್ ಮನೆಗೆ ಬಂದರಾದರೂ, ಅಖ್ಲಾಕ್ ನನ್ನು ಕಾಪಾಡಲು ಸಾಧ್ಯವಾಗಲಿಲ್ಲ.
ದಾಖಲೆಗಳನ್ನು ಪರೀಶೀಲಿಸಿದಾಗ, ಅಖ್ಲಾಕ್ ರ ಅವರ ಕೊನೆಯ ಕರೆ ಮನೋಜ್ ಸಿಸೋಡಿಯಾರಿಗೆ ಮಾಡಿರುವುದು ಕಂಡು ಬರುತ್ತದೆ. ಸುಮಾರು ರಾತ್ರಿ 10:30ರ ವೇಳೆಗೆ ಈ ಕರೆ ಮಾಡಲಾಗಿತ್ತು. ಸಿಸೋಡಿಯಾ ಅಖ್ಲಾಕ್ ಮನೆಗಿಂತ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಒಂದು ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
ಈವರೆಗೆ ಈ ಹಳ್ಳಿಯಲ್ಲಿ ಕೋಮು ಹಿಂಸಾಚಾರ ನಡೆದಿರಲಿಲ್ಲ. ಈ ರೀತಿ ನನ್ನ ಸ್ನೇಹಿತನ ಸಾವು ನನಗೆ ತುಂಬಾ ಆಘಾತವನ್ನುಂಟು ಮಾಡಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. ರಾತ್ರಿ ನಾನು ಮಲುಗುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಅಖ್ಲಾಕ್ ನಂಬರ್ ನಿಂದ ಕರೆ ಬಂತು. ಅವನು ನಡುಕದಲ್ಲಿ ಮಾತನಾಡಿದ, ಹೇಗಾದರೂ ಮಾಡಿ ಪೊಲೀಸರನ್ನು ಕರೆಸು ಎಂದ, ಇದು ಅವನ ಕೊನೆಯ ಮಾತಾಗಿತ್ತು.
ತಕ್ಷಣ ನಾನು ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿ, ಆತನ ಮನೆಗೆ ನಾನು ಹೊರಟೆ, ಅಖ್ಲಾಕ್ ಮನಗೆ ಹೋಗುವಷ್ಟರಲ್ಲಿ 15 ನಿಮಿಷಗಳಾಗಿತ್ತು. ಪೊಲೀಸರು ಅಲ್ಲಿಗೆ ದಾವಿಸಿದ್ದರು. ಆದರೆ ಅಷ್ಟರಲ್ಲಿ ಆತನನ್ನು ಹತ್ಯೆ ಮಾಡಲಾಗಿತ್ತು. ಸ್ವಲ್ಪ ಬೇಗ ಹೋಗಿದ್ದರೆ, ದಾಳಿ ಮಾಡಿದ ಗುಂಪಿನ ಜೊತೆ ಮಾತಾಡಿ, ಸ್ನೇಹಿತನನ್ನು ಉಳಿಸಿಕೊಳ್ಳಬಹುದಾಗಿತ್ತು. ಆದರೆ, ನರಳಾಡುತ್ತಿದ್ದ ಮಗ ಡ್ಯಾನಿಷ್ ನನ್ನು ಆಸ್ಪತ್ರೆಗೆ ದಾಖಲಿಸಿದೆವು. ಆತ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಖ್ಲಾಕ್ ತಲೆಗೆ ಬಲವಾದ ಏಟುನಿಂದಲೇ ಸಾವು ಸಂಭವಿಸಿದೆ ಎಂದು ವೈದ್ಯಕೀಯ ವರದಿ ತಿಳಿಸಿದೆ ಎಂದು ಸಿಸೋಡಿಯಾ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com