
ದಾದ್ರಿ (ಉತ್ತರ ಪ್ರದೇಶ): ದಾದ್ರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಶೋಕಾಸ್ ನೋಟಿಸ್ ನೀಡಿದೆ.
ಪ್ರಕರಣ ಸಂಬಂಧ ಸೆಪ್ಟಂಬರ್ 30 ರಂದು ಗೌತಮ ಬುದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ನೋಟೀಸ್ ನೀಡಿರುವ ಅಲ್ಪ ಸಂಖ್ಯಾತರ ಆಯೋಗ 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ.
ಇನ್ನು ಘಟನೆ ಕುರಿತು ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ವಿವರಣೆ ನೀಡಿದ ಕೂಡಲೇ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸುವುದಾಗಿ ರಾಷ್ಟ್ರೀಯ ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷೆ ನಜ್ಮಾ ಹೆಫ್ತುಲ್ಲಾ ತಿಳಿಸಿದ್ದಾರೆ.
ಕೋಮು ಗಲಭೆ ಸೃಷ್ಟಿಸಲು ಈ ಹತ್ಯೆ ನಡೆಸಲಾಯಿತು ಎಂದು ಪೊಲೀಸ್ ಗುಪ್ತಚರ ಇಲಾಖೆ ವರದಿ ನೀಡಿದೆ. ಜೊತೆಗೆ ಮುಜಾಫರ್ ನಗರದಲ್ಲಿ ನಡೆದ ಕೋಮು ಗಲಭೆಯಂತೆ ಇಲ್ಲೂ ಗಲಭೆ ಸೃಷ್ಟಿಸಲು ಯೋಜನೆ ರೂಪಿಸಲಾಗಿತ್ತು ಎಂದು ಹೇಳಿರುವ ಗುಪ್ತಚರ ಇಲಾಖೆ ದಾದ್ರಿಯಲ್ಲಿದ್ದ ಮಸೀದಿ ಕೆಡವಲು ಕೆಲ ಗುಂಪು ಪ್ರಯತ್ನ ನಡೆಸಿತ್ತು ಎಂದು ಕೂಡ ಹೇಳಿದೆ.
Advertisement