
ಅಹಮದಾಬಾದ್: ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಅನಾಮತ್ ಹೋರಾಟ ಸಮಿತಿಯ ಮುಖಂಡ ಹಾರ್ದಿಕ್ ಪಟೇಲ್ ಮೇಲೆ ಜನ ಹಣದ ಮಳೆ ಸುರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಗುಜರಾತ್ ರಾಜ್ಯದ ಸೂರತ್ ನ ಗೋಸಮದಾ ಗ್ರಾಮದಲ್ಲಿ ನಡೆದ ಜಾನಪದ ಗಾಯನ 'ದೇರೋ' ಎಂಬ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಟೇಲ್ ಪಾಲ್ಗೊಂಡಿದ್ದರು.
ಹಾರ್ದಿಕ್ ಪಟೇಲ್ ಮಾತನಾಡುತ್ತಿದ್ದ ವೇಳೆ 100, 500 ಹಾಗೂ 1000 ರೂ. ನೋಟುಗಳ ಕಂತೆಯನ್ನು ಜನತೆ ಅವರ ಮೇಲೆ ಎರಚಿದ್ದರಲ್ಲದೇ 'ಜೈ ಪಾಟಿದಾರ್', 'ಜೈ ಸರ್ದಾರ್' ಎಂಬ ಘೋಷಣೆಗಳನ್ನೂ ಕೂಗಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.
ಹಣ ಎರಚಬೇಡಿ ಎಂದು ಮನವಿ ಮಾಡಿಕೊಂಡರೂ ಜನ ಕೇಳಲಿಲ್ಲ. ಗುಜರಾತ್ ನಲ್ಲಿ 'ದೇರೋ' ಕಾರ್ಯಕ್ರಮದಲ್ಲಿ ಹಣ ತೂರುವುದು ಸಾಮಾನ್ಯವಾಗಿದ್ದು, ಅದರಲ್ಲೂ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಕಾರ್ಯಕ್ರಮಕ್ಕೆ ಬಂದ ಹಿನ್ನಲೆಯಲ್ಲಿ ಪಟೇಲ್ ಸಮುದಾಯದವರು ಇನ್ನಷ್ಟು ಉತ್ಸಾಹದಿಂದ ಹಣ ಎರಚಿದ್ದಾರೆ ಎಂದು ಹಾರ್ದಿಕ್ ಪಾಟೀಲ್ ನಿಕಟವರ್ತಿ ದಿನೇಶ್ ಬಂಬಾನಿಯಾ ಹೇಳಿದ್ದಾರೆ.
Advertisement