ಶಾಬಾನ್ ಬುಖಾರಿ
ದೇಶ
ಇಮಾಮ್ ಬುಖಾರಿ ಪುತ್ರ ಶಾಬಾನ್ ನನ್ನು ವಿವಾಹವಾಗಲಿರುವ ಹಿಂದು ಯುವತಿ?
ಜಮಾ ಮಸೀದಿಯ ಶಾಹಿ ಇಮಾಮ್ ಸಯೀದ್ ಅಹ್ಮದ್ ಬುಕಾರಿಯ ಪುತ್ರ ಶಾಬಾನ್ ಬುಖಾರಿ ಗಾಜಿಯಾಬಾದ್ ನ ಹಿಂದು ಯುವತಿಯನ್ನು ವಿವಾಹವಾಗಲಿದ್ದಾರೆ
ನವದೆಹಲಿ: ದೆಹಲಿ ಜಮಾ ಮಸೀದಿಯ ಶಾಹಿ ಇಮಾಮ್ ಸಯೀದ್ ಅಹ್ಮದ್ ಬುಕಾರಿಯ ಪುತ್ರ ಶಾಬಾನ್ ಬುಖಾರಿ ಗಾಜಿಯಾಬಾದ್ ನ ಹಿಂದು ಯುವತಿಯನ್ನು ವಿವಾಹವಾಗಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಹಲವು ಆಂಗ್ಲ ಪತ್ರಿಕೆಗಳು ಈ ಬಗ್ಗೆ ವರದಿ ಪ್ರಕಟಿಸಿದ್ದು ಹಲವು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದು ಬುಕಾರಿಯನ್ನು ವಿವಾಹವಾಗಲಿರುವ ಹಿಂದು ಯುವತಿ ಇಸ್ಲಾಂ ಗೆ ಮತಾಂತರಗೊಂಡು ಕುರಾನ್ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಹಿಂದು ಯುವತಿಯನ್ನು ವಿವಾಹವಾಗಲು ಸಯೀದ್ ಅಹ್ಮದ್ ಬುಕಾರಿಯಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಯುವತಿ ಇಸ್ಲಾಮ್ ಗೆ ಮತಾಂತರಗೊಳ್ಳಲು ಒಪ್ಪಿಗೆ ಸೂಚಿಸಿದ್ದರಿಂದ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದಾರಂತೆ. ಶಾಬಾನ್ ಬುಕಾರಿ ಎವಿಟಿ ವಿಶ್ವವಿದ್ಯಾಲಯದಯಿಂದ ಸಾಮಾಜಿಕ ಕಾರ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ.
ಮಾಧ್ಯಮ ವರದಿಗಳನ್ನು ಸಯೀದ್ ಅಹ್ಮದ್ ಬುಕಾರಿ ಅಲ್ಲಗಳೆದಿದ್ದಾರೆ. ಕುಟುಂಬದ ಗೌರವವನ್ನು ಕುಗ್ಗಿಸಲು ಈ ರೀತಿಯ ಸುಳ್ಳು ವರದಿ ಮಾಡಲಾಗಿದೆ ಎಂದು ಬುಕಾರಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ