ಫೆಲೆಸ್ತೀನ್ ನಲ್ಲಿ ಮತ್ತೆ ಘರ್ಷಣೆ: ಓರ್ವ ಸಾವು, ನೂರಾರು ಮಂದಿಗೆ ಗಾಯ

ಫೆಲೆಸ್ತೀನ್ ನಲ್ಲಿ ನಾಗರೀಕರು ಹಾಗೂ ಸೈನಕರ ನಡುವಿನ ಘರ್ಷಣೆ ಭುಗಿಲೆದ್ದಿದ್ದು, ಘರ್ಷಣೆ ವೇಳೆ ಓರ್ವ ಯುವಕ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ...
ದಾಳಿ ವೇಳೆ ಗಾಯಗೊಂಡ ವ್ಯಕ್ತಿಯನ್ನು ಬೇರೆಡೆ ಸಾಗಿಸುತ್ತಿರುವ ಜನರ ಗುಂಪು
ದಾಳಿ ವೇಳೆ ಗಾಯಗೊಂಡ ವ್ಯಕ್ತಿಯನ್ನು ಬೇರೆಡೆ ಸಾಗಿಸುತ್ತಿರುವ ಜನರ ಗುಂಪು

ಫೆಲೆಸ್ತೀನ್: ಫೆಲೆಸ್ತೀನ್ ನಲ್ಲಿ ನಾಗರೀಕರು ಹಾಗೂ ಸೈನಕರ ನಡುವಿನ ಘರ್ಷಣೆ ಭುಗಿಲೆದ್ದಿದ್ದು, ಘರ್ಷಣೆ ವೇಳೆ ಓರ್ವ ಯುವಕ ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಜೆರುಸಲೇಂ ಹಳೆಯ ನಗರಕ್ಕೆ ಫೆಲೆಸ್ತೀನಿಯನ್ನರಿಗೆ ಪ್ರವೇಶ ನಿಷೇಧಿಸಿ ಇಸ್ರೇಲ್ ನಿರ್ಧಾರ ಕೈಗೊಂಡಿರುವುದರಿಂದ ಘರ್ಷಣೆ ಭುಗಿಲೆದ್ದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಇಸ್ರೇಲ್ ಸೈನಿಕರು ರಬ್ಬರ್ ಲೇಪಿತ ಉಕ್ಕಿನ ಗುಂಡು ಹಾಗೂ ಇತರ ಅಪಾಯಕಾರಿ ಮದ್ದುಗುಂಡುಗಳನ್ನು ಬಳಸುತ್ತಿದ್ದಾರೆ ಎಂದು ಫೆಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿಕೊಂಡಿದೆ.

ಇದೀಗ ಫೆಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಹೇಳುವ ಪ್ರಕಾರ ಘರ್ಷಣೆ ವೇಳೆ ಸುಮಾರು 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ 150 ಮಂದಿಯ ಸ್ಥಿತಿ ಗಂಭೀರವಾಗಿದೆ.  ತುಲಕರನ್ ಚೆಕ್ ಪಾಯಿಂಟ್ ಬಳಿ ಪ್ರತಿಭಟನಾಕಾರರೊಂದಿಗಿದ್ದ 18 ವರ್ಷದ ಸುಲೈಮಾನ್ ಎಂಬ ವ್ಯಕ್ತಿ ಸೇನೆಯ ಗುಂಡಿನ ದಾಳಿಗೆ ಹತ್ಯೆಯಾಗಿದ್ದಾನೆ ಎಂದು ಹೇಳಿದೆ. ಇಸ್ರೇಲ್ ನ ಈ ನಿರ್ಧಾರವನ್ನು ಇದೀಗ ಹಲವು ಜನಾಂಗಗಳು ವಿರೋಧಿಸುತ್ತಿದ್ದು ಕಾನೂನು ಬಾಹಿರ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com