
ಮುಂಬಯಿ: ಮಸ್ಲಿಂ ಮಹಿಳೆಯೊಬ್ಬಳು ಮುಂಬಯಿಯ ವಾಡಲಾ ಗಣಪತಿ ದೇವಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಯ ಹೆರಿಗೆಗೆ ಹಿಂದೂ ಮಹಿಳಾ ಭಕ್ತರು ಸಹಾಯ ಮಾಡಿದ್ದಾರೆ.
ಮುಂಬಯಿ ನಿವಾಸಿ ಇಲಿಯಾಜ್ ಶೇಕ್ ತನ್ನ ಪತ್ನಿ ನೂರ್ ಜಹಾನ್ ಶೇಕ್ ಳನ್ನು ಹೆರಿಗೆಗೆ ಮನೆಯಿಂದ ಆಸ್ಪತ್ರೆಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ಈ ವೇಳೆ ಆಕೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕಾರಿನಲ್ಲಿ ಹೆರಿಗೆ ಯಾಗುವುದಕ್ಕೆ ಟ್ಯಾಕ್ಸಿ ಚಾಲಕ ತೀವ್ರ ವಿರೋಧ ವ್ಯಕ್ತ ಪಡಿಸಿ, ನೂರ್ ಜಾನ್ ಳನ್ನು ಟ್ಯಾಕ್ಯಿಯಿಂದ ಕೆಳಗಿಳಿಸಿದ್ದಾನೆ.
ದಿಕ್ಕು ತೋಚದ ಇಲಿಯಾಜ್ ಶೇಖ್ ರಸ್ತೆಯ ಪಕ್ಕದಲ್ಲೇ ಇದ್ದ ಗಣಪತಿ ದೇವಾಲಯದ ಹತ್ತಿರ ತನ್ನ ಪತ್ನಿಯನ್ನು ಕರೆದು ಕೊಂಡಿದ್ದಾನೆ. ದೇವಾಲಯದಲ್ಲಿದ್ದ ಮಹಿಳೆಯರು, ದೇವಾಸ್ಥಾನದ ಆವರಣದಲ್ಲೇ ಸೀರೆ, ಬೆಡ್ ಶೀಟ್ ಗಳನ್ನು ಸುತ್ತ ಕಟ್ಟಿ ಆಕೆಗೆ ಹೆರಿಗೆ ಮಾಡಿಸಿದ್ದಾರೆ. ನೂರ್ ಜಾನ್ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ ಮತ್ತು ಮಗು ಆರೋಗ್ಯದಿಂದ ಇದ್ದಾರೆ ಎಂದು ಹೇಳಲಾಗಿದೆ.
ಟ್ಯಾಕ್ಸಿ ಚಾಲಕ ಕಾರಿನಿಂದ ನಮ್ಮನ್ನು ಬಲವಂತವಾಗಿ ಕೆಳಗಿಳಿಸಿದಾಗ ಏನು ಮಾಡಬೇಕೆಂದು ತೋಚದೆ ತುಂಬಾ ಗಾಬರಿಯಾಗಿದ್ದೆವು. ಆಗ ದಾರಿ ಮಧ್ಯ ಗಣಪತಿ ದೇವಾಲಯ ಕಾಣಿಸಿತು. ದೇವಾಲಯದ ಹೊರಗಡೆ ಕುಳಿತಿದ್ದೆವು ದೇವರು ನಮ್ಮನ್ನು ಕೈಬಿಡುವುದಿಲ್ಲ ಎಂಬ ನಂಬಿಕೆಯಿಂದ ಅಲ್ಲಿಗೆ ಬಂದೆವು. ಆಗ ಕೆಲ ಮಹಿಳೆಯರು ಬಂದು ನೂರ್ ಜಾನ್ ಳನ್ನು ಗಣಪತಿ ದೇವಾಸ್ಥಾನದ ಆವರಣದೊಳಕ್ಕೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸಿದರು. ತನ್ನ ಮಗನಿಗೆ ಗಣೇಶ ಎಂದು ಹೆಸರಿಡುವುದಾಗಿ ಇಲಿಯಾಜ್ ಶೇಕ್ ತಿಳಿಸಿದ್ದಾನೆ.
Advertisement