
ಲಕ್ನೋ: ಉತ್ತರ ಪ್ರದೇಶದ ದಾದ್ರಿಯಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲೇಶ್ ಯಾದವ್ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿರುವ ವರದಿಯಲ್ಲಿ ಎಲ್ಲಿಯೂ ಗೋಮಾಂಸದ ಪ್ರಸ್ತಾಪ ಮಾಡಿಲ್ಲ ಎಂದು ತಿಳಿದು ಬಂದಿದೆ.
ವರದಿಯಲ್ಲಿ 'ಗೋ ಮಾಂಸ ಭಕ್ಷಣೆ ಅಥವಾ ಗೋ ಮಾಂಸ ಸಂಗ್ರಹ' ಎಂಬ ವಿಷಯವನ್ನೇ ಕೈ ಬಿಡಲಾಗಿದೆ. ಈ ರೀತಿಯ ಗಾಳಿ ಸುದ್ದಿ ಹರಡಿಯೇ ಮೊಹಮ್ಮದ್ ಅಖ್ಲಾಖ್ ಅವರನ್ನು ಕೊಲ್ಲಲಾಗಿದೆ ಎಂದು ಎಫ್‌ಐಆರ್‌ನಲ್ಲಿಯೂ ದಾಖಲಿಸಲಾಗಿದೆ.
ಘಟನೆ ನಡೆದ ನಾಲ್ಕು ದಿನಗಳ ನಂತರ ರಾಜ್ಯ ಸರಕಾರ ಕೇಂದ್ರಕ್ಕೆ ವರದಿ ನೀಡಿದೆ. ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿ, ಎಫ್‌ಐಆರ್‌ನಲ್ಲಿ ದಾಖಲಿಸಿದ ಅಂಶಗಳನ್ನೇ ಕೈ ಬಿಡಲಾಗಿದೆ. ವರದಿಯಲ್ಲಿ ಅಪರಿಚಿತ ವ್ಯಕ್ತಿಗಳಿಂದ ಅಖ್ಲಾಖ್ ಹಾಗೂ ಅವರ ಮಗನ ಮೇಲೆ 'ಮಾರಾಟ ನಿಷೇಧಿಸಿದ ಪ್ರಾಣಿಯೊಂದರ ಮಾಂಸ ಸೇವಿಸಿದ' ಆರೋಪದ ಮೇಲೆ ಹಲ್ಲೆ ನಡೆಸಲಾಗಿದೆ, ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯಾವ ಕಾರಣದಿಂದ ಗಲಭೆ ನಡೆದ ಸಾಧ್ಯತೆ ಇದೆಯೋ, ಆ ಅಂಶವನ್ನು ಉತ್ತರ ಪ್ರದೇಶ ಸರಕಾರ ಕೇಂದ್ರಕ್ಕೆ ನೀಡಿದ ವರದಿಯಲ್ಲಿ ಸೇರಿಸಿಲ್ಲ. ದಾದ್ರಿಯಲ್ಲಿ ದಾಖಲಿಸಿದ ಎಫ್‌ಐಆರ್ ಅನ್ನು ಪುನರ್ ರಚಿಸಲಾಗಿದೆ, ಎಂದು ಹಿರಿಯ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement