ಭಾರತಕ್ಕೆ ದುರ್ಗಾ ಮಾತೆ ವಿಗ್ರಹ ಮರಳಿಸಿದ ಜರ್ಮನ್‌ ಚಾನ್ಸಲರ್‌ ಏಂಜೆಲಾ

2 ದಶಕದ ಹಿಂದೆ ಜಮ್ಮು-ಕಾಶ್ಮೀರದಿಂದ ಕಳವಾಗಿದ್ದ 10ನೇ ಶತಮಾನಕ್ಕೆ ಸೇರಿದ ದುರ್ಗಾಮಾತೆ ವಿಗ್ರಹವನ್ನು ಭಾರತ ಪ್ರವಾಸದಲ್ಲಿ ಜರ್ಮನ್‌ ಚಾನ್ಸಲರ್‌ ಏಂಜೆಲಾ ಮಾರ್ಕೆಲ್‌...
ಏಜೆಂಲಾ ಮಾರ್ಕೆಲ್, ನರೇಂದ್ರಮೋದಿ
ಏಜೆಂಲಾ ಮಾರ್ಕೆಲ್, ನರೇಂದ್ರಮೋದಿ
ನವದೆಹಲಿ: 2 ದಶಕದ ಹಿಂದೆ ಜಮ್ಮು-ಕಾಶ್ಮೀರದಿಂದ ಕಳವಾಗಿದ್ದ 10ನೇ ಶತಮಾನಕ್ಕೆ ಸೇರಿದ ದುರ್ಗಾಮಾತೆ ವಿಗ್ರಹವನ್ನು ಭಾರತ ಪ್ರವಾಸದಲ್ಲಿ ಜರ್ಮನ್‌ ಚಾನ್ಸಲರ್‌ ಏಂಜೆಲಾ ಮಾರ್ಕೆಲ್‌ ಭಾರತಕ್ಕೆ ಹಿಂದಿರುಗಿಸಿದ್ದಾರೆ. 
3 ದಿನಗಳ ಪ್ರವಾಸ ನಿಮಿತ್ತ ಭಾರತಕ್ಕೆ ಆಗಮಿಸಿರುವ ಏಂಜೆಲಾ ಅವರು ಮೋದಿ ಅವರಿಗೆ ದುರ್ಗಾ ಮಾತೆ ವಿಗ್ರಹವನ್ನು ಹಸ್ತಾಂತರಿಸಿದ್ದು ಮಾರ್ಕೆಲ್‌ಗೆ ಮೋದಿ ಧನ್ಯವಾದ ಅರ್ಪಿಸಿದರು. 
ವಿಗ್ರಹ ಇದುವರೆಗೆ ಜರ್ಮನಿಯ ಸ್ಟಟ್‌ಗರ್ಟ್‌ ಮ್ಯೂಸಿಯಂನಲ್ಲಿ ಇತ್ತು. ಮಹಿಷಾಸುರ ಮರ್ದಿನಿ ಅವತಾರದಲ್ಲಿರುವ ದುರ್ಗಾದೇವಿಯ ವಿಗ್ರಹವನ್ನು 1990ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿರುವ ದೇವಾಲಯದಿಂದ ಅಪಹರಿಸಲಾಗಿತ್ತು. 2012ರಲ್ಲಿ ಜರ್ಮನಿಯ ಲಿಂಡನ್‌ ಮ್ಯೂಸಿಯಂನಲ್ಲಿ ಈ ವಿಗ್ರಹ ಇರುವುದನ್ನು ಭಾರತ ಪತ್ತೆ ಹಚ್ಚಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com