ಹಿಂದೂಸ್ತಾನವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸಲು ಯತ್ನ ನಡೆಯುತ್ತಿದೆ: ಅಜಂಖಾನ್

ದಾದ್ರಿ ಪ್ರಕರಣ ಸಂಬಂಧ ಮಧ್ಯಸ್ಥಿಕೆ ವಹಿಸಲು ವಿಶ್ವಸಂಸ್ಥೆ ಮೊರೆ ಹೋಗಿ ಹೋಗಿ ಈಗಾಗಲೇ ಹಲವು ವಿರೋಧಗಳಿಗೆ ಕಾರಣವಾಗಿರುವ ಉತ್ತರ ಪ್ರದೇಶದ ಸಚಿವ ಅಜಂ ಖಾನ್ ಅವರು ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು...
ಉತ್ತರ ಪ್ರದೇಶದ ಸಚಿವ ಅಜಂ ಖಾನ್ (ಸಂಗ್ರಹ ಚಿತ್ರ)
ಉತ್ತರ ಪ್ರದೇಶದ ಸಚಿವ ಅಜಂ ಖಾನ್ (ಸಂಗ್ರಹ ಚಿತ್ರ)

ಲಖನೌ: ದಾದ್ರಿ ಪ್ರಕರಣ ಸಂಬಂಧ ಮಧ್ಯಸ್ಥಿಕೆ ವಹಿಸಲು ವಿಶ್ವಸಂಸ್ಥೆ ಮೊರೆ ಹೋಗಿ ಹೋಗಿ ಈಗಾಗಲೇ ಹಲವು ವಿರೋಧಗಳಿಗೆ ಕಾರಣವಾಗಿರುವ ಉತ್ತರ ಪ್ರದೇಶದ ಸಚಿವ ಅಜಂ ಖಾನ್ ಅವರು ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ.

ಮುಸ್ಲಿಮರು ಇಸ್ಲಾಮಿಕ್ ಸ್ಟೇಟ್ ಗೆ ಹೋಗದೆ ನೆಲೆಯೂರಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಭಾರತ ಜಾತ್ಯಾತೀತವೆಂಬ ಚೌಕಟ್ಟಿನಲ್ಲಿರುವುದರಿಂದ. ಕೆಲವು ಹಿಂದುತ್ವ ಶಕ್ತಿಗಳು ಇದೀಗ ಹಿಂದೂಸ್ತಾನವನ್ನು ಹಿಂದೂರಾಷ್ಟ್ರವಾಗಿ ಪರಿವರ್ತಿಸಲು ಯತ್ನಿಸುತ್ತಿದೆ ಎಂದು ಅಜಂಖಾನ್ ಬುಧವಾರ ಹೇಳಿದ್ದಾರೆ.

ಈ ಕುರಿತಂತೆ ಲಖನೌವಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ದಾದ್ರಿ ಪ್ರಕರಣ ಸಂಬಂಧ ಕಿಡಿಕಾರಿದ್ದು, ಪಾಕಿಸ್ತಾನಕ್ಕೆ ಹೋಗಿರೆಂಬ ಬೆದರಿಕೆಗಳನ್ನು ಇನ್ನೆಷ್ಟು ದಿನ ನಾವು ಸಹಿಸಿಕೊಳ್ಳಬೇಕು, ಮುಸ್ಲಿಮರು ದನಿ ಎತ್ತಲು, ಪ್ರತಿಭಟನೆ ನಡೆಸಲು ಇದೀಗ ಸೂಕ್ತ ಸಮಯ ಎದುರಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿರುವ ಅವರು, ಪ್ರಧಾನಿಯವರು ತಮ್ಮ ಕಾಲಿಗೆ ರು.2 ಲಕ್ಷ ಪಾದರಕ್ಷೆಗಳನ್ನು ಹಾಕುತ್ತಾರೆ. ಮೋದಿಯವರು ತಮ್ಮ ದೇಶವನ್ನೇ ಶಾಂತಿಯುತವಾಗಿಡಲು ಸಾಧ್ಯವಾಗಲಿಲ್ಲ. ಇದೀಗ ವಿದೇಶಗಳಿಗೆ ತೆರಳಿ ವಿದೇಶಿಯರು ಭಾರತದಲ್ಲಿ ಬಂಡವಾಳ ಹೂಡುವಂತೆ ಹೇಳುತ್ತಿರುವುದು ಒಂದು ರೀತಿಯ ಬೂಟಾಟಿಕೆಯ ಮಾತಿನಂತಿರುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com