ದಾದ್ರಿ ಪ್ರಕರಣ: ಪ್ರಧಾನಿ ಕಚೇರಿಗೆ ವರದಿ ಸಲ್ಲಿಸಿದ ಗೃಹ ಸಚಿವಾಲಯ

ದೇಶದಾದ್ಯಂತ ಹಲವು ವಿವಾದಗಳನ್ನು ಸೃಷ್ಟಿ ಮಾಡಿರುವ ದಾದ್ರಿಯ ಮುಸ್ಲಿಂ ಹತ್ಯೆ ಪ್ರಕರಣದ ವಿವರವನ್ನು ಕೇಂದ್ರ ಗೃಹ ಸಚಿವಾಲಯವು ಪ್ರಧಾನಮಂತ್ರಿ ಕಚೇರಿಗೆ ಬುಧವಾರ ಸಲ್ಲಿಸಿದೆ...
ಮೊಹಮ್ಮದ್ ಅಖ್ಲಾಕ್ ನ ಸಾವಿನ ದುಃಖದಲ್ಲಿರುವ ಕುಟುಂಬಸ್ಥರು
ಮೊಹಮ್ಮದ್ ಅಖ್ಲಾಕ್ ನ ಸಾವಿನ ದುಃಖದಲ್ಲಿರುವ ಕುಟುಂಬಸ್ಥರು

ನವದೆಹಲಿ: ದೇಶದಾದ್ಯಂತ ಹಲವು ವಿವಾದಗಳನ್ನು ಸೃಷ್ಟಿ ಮಾಡಿರುವ ದಾದ್ರಿಯ ಮುಸ್ಲಿಂ ಹತ್ಯೆ ಪ್ರಕರಣದ ವಿವರವನ್ನು ಕೇಂದ್ರ ಗೃಹ ಸಚಿವಾಲಯವು ಪ್ರಧಾನಮಂತ್ರಿ ಕಚೇರಿಗೆ ಬುಧವಾರ ಸಲ್ಲಿಸಿದೆ.

ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣವಿದೀಗ ದೇಶದಾದ್ಯಂತ ಹಲವು ವಿವಾದಗಳನ್ನು ಸೃಷ್ಟಿಸುತ್ತಿದ್ದು, ಜನರಲ್ಲಿ ವಾಕ್ಸಮರವನ್ನೇ ಸೃಷ್ಟಿಸಿದೆ. ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವಾಲಯವು ಪ್ರಧಾನಮಂತ್ರಿ ಸಚಿವಾಲಯಕ್ಕೆ ದಾದ್ರಿ ಪ್ರಕರಣ ಸಂಬಂಧ ಸಂಪೂರ್ಣ ವಿವರವನ್ನು ಸಲ್ಲಿಸಿದೆ ಎಂದು ತಿಳಿದುಬಂದಿದೆ.

ದಾದ್ರಿ ಪ್ರಕರಣ ದೇಶದಾದ್ಯಂತ ಸಾಕಷ್ಟು ಸುದ್ದಿ ಮಾಡುತ್ತಿದ್ದರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತ್ರ ಮೌನ ವಹಿಸಿರುವುದರ ವಿರುದ್ಧ ಪ್ರತಿ ಪಕ್ಷಗಳು ಸಾಕಷ್ಟು ಕಿಡಿಕಾರಿದ್ದವು. ಮೋದಿಯವರು ತಮ್ಮ ಮೌನವನ್ನು ಮುರಿದು ಘಟನೆಯನ್ನು ವಿರೋಧಿಸಬೇಕು ಎಂದು ಕಾಂಗ್ರೆಸ್ ಪಕ್ಷ ಪಟ್ಟು ಹಿಡಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com