ದಾದ್ರಿಯಲ್ಲಿ ಹಿಂದೂಗಳಿಗೆ 'ಗನ್' ವಿತರಿಸಲು ಮುಂದಾದ ಯೋಗಿ ಬೆಂಬಲಿಗರು

ದೇಶದಾದ್ಯಂತ ಹಲವು ವಿವಾದಗಳನ್ನು ಸೃಷ್ಟಿಸಿರುವ ದಾದ್ರಿಯ ಮುಸ್ಲಿಂ ಹತ್ಯೆ ಪ್ರಕರಣಕ್ಕೆ ಕೋಮು ಬಣ್ಣ ತುಂಬಲು ಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ಬಿಸಾಡ ಗ್ರಾಮದಲ್ಲಿರುವ ಹಿಂದೂಗಳಿಗೆ ಬುಧವಾರ...
ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)
ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)

ದಾದ್ರಿ: ದೇಶದಾದ್ಯಂತ ಹಲವು ವಿವಾದಗಳನ್ನು ಸೃಷ್ಟಿಸಿರುವ ದಾದ್ರಿಯ ಮುಸ್ಲಿಂ ಹತ್ಯೆ ಪ್ರಕರಣಕ್ಕೆ ಕೋಮು ಬಣ್ಣ ತುಂಬಲು ಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರು ಬಿಸಾಡ ಗ್ರಾಮದಲ್ಲಿರುವ ಹಿಂದೂಗಳಿಗೆ ಬುಧವಾರ 'ಗನ್' ವಿತರಿಸಲು ಮುಂದಾಗಿದ್ದು ಇದೀಗ ಹಲವು ವಿವಾದಗಳಿಗೆ ಕಾರಣವಾಗಿದೆ.

ನಿಷೇಧಾಜ್ಞೆಯ ಮಧ್ಯೆಯೂ ಇಂದು ಬಿಸಾಡ ಗ್ರಾಮಕ್ಕೆ ನುಗ್ಗಲು ಯತ್ನಿಸಿದ ಆದಿತ್ಯನಾಥ್ ನೇತೃತ್ವದ ಬಲಪಂಧೀಯ ಸಂಘಟನೆ ಹಿಂದೂ ಯುವ ವಾಹಿನಿ ಕಾರ್ಯಕರ್ತರು ಅಲ್ಲಿನ ಹಿಂದೂ ನಿವಾಸಿಗಳಿಗೆ ಬಂದೂಕು ವಿತರಿಸಲು ಯತ್ನಿಸಿದರಾದರೂ ಅವರ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು.

ಗ್ರಾಮದಲ್ಲಿರುವ ಹಿಂದೂ ಜನರ ಪರಿಸ್ಥಿತಿ ವಿಚಾರಿಸಲು ನಾವು ಹೋದೆವು ಆದರೆ ನಮ್ಮ ಮೇಲೆ ಅಲ್ಲಿನ ಅಧಿಕಾರಿಗಳು ದೌರ್ಜನ್ಯವೆಸಗಿದರು. ಗ್ರಾಮದಲ್ಲಿರುವ ಹಿಂದುಗಳ ರಕ್ಷಣೆಗೆ ನಾವು ನಮ್ಮಿಂದಾಗುವ ಅಲ್ಲಾ ಸಹಾಯವನ್ನು ಮಾಡುತ್ತೇವೆ. ಹಿಂದುಗಳ ರಕ್ಷಣೆಗೆ ತನ್-ಮನ್-ಧನ್-ಗನ್' ಎಲ್ಲವನ್ನು ನೀಡಿವೆವು ಎಂದು ಕಾರ್ಯಕರ್ತರಲ್ಲೊಬ್ಬರಾಗಿದ್ದ ಜಿತೇಂದರ್ ತ್ಯಾಗಿ ಎಂಬುವವರು ಹೇಳಿಕೊಂಡಿದ್ದಾರೆ.

ಇದೇ ವೇಳೆ ಸೆ.28 ರಂದು ಹತ್ಯೆಗೀಡಾದ ವ್ಯಕ್ತಿ ಅಖ್ಲಾಕ್ ಕುರಿತಂತೆ ವಿಷಾದ ವ್ಯಕ್ತಪಡಿಸಿದ ಅವರು, ಪ್ರಕರಣವನ್ನು ಸಿಬಿಐ ವಹಿಸುವಂತೆ ಆಗ್ರಹಿಸಿದ್ದಾರೆ. ಹಸುವನ್ನು ಸಾಯಿಸಿದ ಮುಸ್ಲಿಂ ವ್ಯಕ್ತಿಗೆ ಸರ್ಕಾರ ಪರಿಹಾರ ಧನವನ್ನು ಘೋಷಿಸಿದೆ. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಭಟನೆ ವೇಳೆ ಸಾವನ್ನಪ್ಪಿದ್ದ ಹಿಂದೂ ಜೈ ಪ್ರಕಾಶ್ ಗೇಗೆ ಸರ್ಕಾರ ಪರಿಹಾರ ಧನವನ್ನು ಘೋಷಿಸಲಿಲ್ಲ. ಸರ್ಕಾರವೇನು ತನ್ನ ಕೈಯಿಂದ ಹಣವನ್ನು ನೀಡುತ್ತಿದೆಯೇ. ಮುಸ್ಲಿಮರಿಗೆ ಮಾತ್ರ ಸರ್ಕಾರ ಸಹಾಯ ಮಾಡುವುದೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com