
ಪಾಟ್ನಾ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದೇಶದ ಪ್ರಧಾನಿಯಾಗಲು ಬಯಸಿದ್ದಾರೆ ಎಂದು ಆರ್‌ಜೆಡಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಗುರುವಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲಾಲು, ಬಿಜೆಪಿ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಳ್ಳಿ, ತಾವು ಪ್ರಧಾನಿಯಾಗಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ವೇಳೆ ಪ್ರಧಾನಿ ವಿರುದ್ಧವೂ ವಾಗ್ದಾಳಿ ನಡೆಸಿದ ಲಾಲು, ಮೋದಿ ಯಾವತ್ತೂ ದಲಿತ ಮತ್ತು ಬಡವರ ವಿರೋಧಿ ಎಂದರು.
ದಾದ್ರಿ ಹತ್ಯೆ ಪ್ರಕರಣದ ಬಗ್ಗೆ ಪ್ರಧಾನಿ ಮೌನವನ್ನು ಪ್ರಶ್ನಿಸಿದ ಲಾಲು, 'ಅವರು ಮೂಗನಾ, ಏಕೆ ಮೌನವಾಗಿದ್ದಾರೆ? ಅದು ಸರಿನಾ ಅಥವಾ ತಪ್ಪು ಅಂತ ಹೇಳಬೇಕು' ಎಂದಿದ್ದಾರೆ.
Advertisement