ಮುಜಾಫರ್ ನಗರ ಗಲಭೆಗೂ ದಾದ್ರಿ ಪ್ರಕರಣಕ್ಕೂ ಸಂಬಂಧವಿದೆ: ಮುಲಾಯಂ ಸಿಂಗ್

ದೇಶದಾದ್ಯಂತ ತೀವ್ರ ಸುದ್ದಿ ಮಾಡಿತ್ತಿರುವ ದಾದ್ರಿ ಪ್ರಕರಣಕ್ಕೆ ಇದೀಗ ರಾಜಕೀಯ ಬಣ್ಣ ಬಂದಿದ್ದು, ರಾಜಕೀಯ ನಾಯಕರ ನಡುವೆ ವಾಕ್ಸಮರದ ಕೆಸರೆರಚಾಟ ಆರಂಭವಾಗಿದೆ. ಪ್ರಕರಣ ಸಂಬಂಧ ಇದೀಗ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್...
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ (ಸಂಗ್ರಹ ಚಿತ್ರ)
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ (ಸಂಗ್ರಹ ಚಿತ್ರ)

ಲಖನೌ: ದೇಶದಾದ್ಯಂತ ತೀವ್ರ ಸುದ್ದಿ ಮಾಡಿತ್ತಿರುವ ದಾದ್ರಿ ಪ್ರಕರಣಕ್ಕೆ ಇದೀಗ ರಾಜಕೀಯ ಬಣ್ಣ ಬಂದಿದ್ದು, ರಾಜಕೀಯ ನಾಯಕರ ನಡುವೆ ವಾಕ್ಸಮರದ ಕೆಸರೆರಚಾಟ ಆರಂಭವಾಗಿದೆ. ಪ್ರಕರಣ ಸಂಬಂಧ ಇದೀಗ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು, ಮುಜಾಫರ್ ನಗರದಲ್ಲಿ ನಡೆದ ಗಲಭೆಗೂ ದಾದ್ರಿ ಪ್ರಕರಣಕ್ಕೂ ಒಂದಕ್ಕೊಂದು ಸಂಬಂಧವಿದೆ ಎಂದು ಹೊಸ ವಿವಾದವೊಂದನ್ನು ಗುರುವಾರ ಹುಟ್ಟುಹಾಕಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಮುಜಾಫರ್ ನಗರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳೇ ಇದೀಗ ದಾದ್ರಿ ಪ್ರಕರಣದಲ್ಲೂ ಭಾಗಿಯಾಗಿರುವ ಸಂಭವವಿದೆ. ಹೀಗಾಗಿ ದಾದ್ರಿ ಪ್ರಕರಣಕ್ಕೂ ಮುಜಾಫರ್ ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೂ ಒಂದಕ್ಕೊಂದು ಸಂಬಂಧವಿದೆ. ದಾದ್ರಿ ಪ್ರಕರಣದಲ್ಲಿ ಒಂದೇ ಪಕ್ಷದ ಮೂವರು ವ್ಯಕ್ತಿಗಳು ಭಾಗಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರವನ್ನು ತ್ಯಾಗಮಾಡಲು ನಾವು ಸಿದ್ಧವಿದ್ದೇವೆ. ರಾಜ್ಯ ಸರ್ಕಾರ ಆರೋಪಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿ ಹತ್ಯೆ ಪ್ರಕರಣ ಸಂಬಂಧಿಸಿ ಉತ್ತರ ಪ್ರದೇಶದ ಪೊಲೀಸರು ಇದೀಗ 9 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಬಂಧಿತ 9 ಮಂದಿಯಲ್ಲಿ 7 ವ್ಯಕ್ತಿಗಳು ಸ್ಥಳೀಯ ಬಿಜೆಪಿ ನಾಯಕನೊಬ್ಬನೊಂದಿಗೆ ಸಂಬಂಧಹೊಂದಿರುವವರಾಗಿದ್ದಾರೆಂಬ ಮಾತುಗಳು ಕೇಳುಬರುತ್ತಿವೆ. ಈ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದು, ಬಿಜೆಪಿ ನಾಯಕರ ವಿರುದ್ಧ ಹಲವು ಆರೋಪಗಳನ್ನು ವ್ಯಕ್ತಪಡಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com