
ನವದೆಹಲಿ: ಮ್ಯಾಗಿ ನೂಡಲ್ಸ್ ನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸುವ ಕ್ರಮವನ್ನು ನೆಸ್ಲೆ ಇಂಡಿಯಾ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ನೆಸ್ಲೆ ಇಂಡಿಯಾ, ಮುಂಬೈ ಹೈಕೋರ್ಟ್ ಆದೇಶದ ಪ್ರಕಾರ ಈಗಾಗಲೇ ಮ್ಯಾಗಿ ನೂಡಲ್ಸ್ ನ್ನು ಪರೀಕ್ಷೆಗೊಳಪಡಿಸಲಾಗಿದೆ. ಪ್ರಯೋಗಾಲಯದಿಂದ ಅದರ ವರದಿ ಬರುವುದಕ್ಕೂ ಮುನ್ನವೇ ಮತ್ತೊಂದು ಪರೀಕ್ಷೆ ನಡೆಸುವುದನ್ನು ನೆಸ್ಲೆ ಇಂಡಿಯಾ ಪ್ರಶ್ನಿಸಿದೆ.
ನೆಸ್ಲೆ ನ್ಯಾಯಸಮ್ಮತವಲ್ಲದ ವಹಿವಾಟು ನಡೆಸುತ್ತಿರುವುದರ ಬಗ್ಗೆ ಗ್ರಾಹಕ ವ್ಯವಹಾರಗಳ ಸಚಿವಾಲಯ ಮೊಕದ್ದಮೆ ದಾಖಲಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕೆಂದು ಹೇಳುತ್ತು ಈ ಹಿನ್ನೆಲೆಯಲ್ಲಿ ನೆಸ್ಲೆ ಸಂಸ್ಥೆ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಕ್ರಿಯಿಸಿದ್ದು ಮ್ಯಾಗಿ ಮಾದರಿಗಳ ಪರೀಕ್ಷೆಯ ವರದಿ ನೀರಿಕ್ಷೆಯಲ್ಲಿರುವಾಗಲೇ ಮತ್ತೊಂದು ಪರೀಕ್ಷೆ ನಡೆಸುವ ಅಗತ್ಯವೇಣು ಎಂದು ನೆಸ್ಲೆ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.
Advertisement