ದಾದ್ರಿ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡುವುದು ಪ್ರಧಾನಿ ಕೆಲಸವಲ್ಲ: ಗಡ್ಕರಿ

ದಾದ್ರಿ ಪ್ರಕರಣದಲ್ಲಿ ಪ್ರಧಾನಿ ಪ್ರತಿಕ್ರಿಯೆ ನೀಡುವುದು ಪ್ರಧಾನಿ ಕೆಲಸವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ

ನವದೆಹಲಿ: ದಾದ್ರಿ ಪ್ರಕರಣದಲ್ಲಿ ಪ್ರಧಾನಿ ಪ್ರತಿಕ್ರಿಯೆ ನೀಡುವುದು ಪ್ರಧಾನಿ ಕೆಲಸವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಪ್ರತಿಯೊಂದು ವಿಷಯಕ್ಕೂ ಪ್ರತಿಕ್ರಿಯೆ ನೀಡುವುದು ಸರ್ಕಾರದ ಮುಖ್ಯಸ್ಥರಾಗಿರುವ ಪ್ರಧಾನಿ ಮೋದಿ ಅವರ ಕೆಲಸವಲ್ಲ, ಪ್ರಧಾನಿ ಮಾತನಾಡಿದರೆ ಅವರೇಕೆ ಮಾತನಾಡುತ್ತಾರೆ ಎಂದು ಪ್ರಶ್ನಿಸುತ್ತಾರೆ. ಮಾತನಾಡದೇ ಇದ್ದರೆ, ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸುತ್ತಾರೆ, ದೇಶದಲ್ಲಿ ನಡೆಯುವ ಪ್ರತಿಯೊಂದು ಘಟನೆ ಬಗ್ಗೆಯೂ ಮಾತನಾಡಲು ಸಾಧ್ಯವಾಗುತ್ತದೆಯೇ, ಅದಕ್ಕಾಗಿ ಗೃಹ ಸಚಿವರು ಹಾಗು ಇನ್ನಿತರ ಸಚಿವರಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ. 
ಈ ಹಿಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಎಲ್ಲಾ ಘಟನೆಗಳ ಬಗ್ಗೆ ಪ್ರತಿಕ್ರಿಯಿಸುತ್ತಿದ್ದರಾ ಎಂದು ಪ್ರಶ್ನಿಸಿರುವ ಗಡ್ಕರಿ ಅತಿ ಸೂಕ್ಷ್ಮವಾದ ಅಲ್ಪಸಂಖ್ಯಾತರು ಪ್ರತಿಬಾರಿಯೂ ಮೋದಿ ಅವರನ್ನು ದೂರುತ್ತಾರೆ.  ವ್ಯಕ್ತಿಯೊಬ್ಬನನ್ನು ಕೊಂದಿದ್ದು ದುರದೃಷ್ಟಕರ, ಇಂತಹ ಪ್ರಕರಣಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಲಿದೆ. ಆದರೆ ಅಲ್ಪಸಂಖ್ಯಾತರು ತಮ್ಮ ಆದ್ಯತೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದು ಪ್ರತಿಯೊಂದಕ್ಕೂ ಪ್ರಧಾನಿ ಮೋದಿ ಅವರನ್ನು ದೂರುತ್ತಿದ್ದಾರೆ ಎಂದು ಗಡ್ಕರಿ ಅಸಮಾಧಾನವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com