ಸೈನಿಕರ ವಿಚಾರದಲ್ಲಿ ಸೂಕ್ಷ್ಮತೆ ವಹಿಸುವ ಅಗತ್ಯವಿದೆ: ಆದಿತ್ಯ ಠಾಕ್ರೆ

ಪಾಕಿಸ್ತಾನದ ಖ್ಯಾತ ಘಜಲ್ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿ ರದ್ದು ವಿಚಾರ ಇದೀಗ ವಿವಾದಕ್ಕೆ ತಿರುಗಿದ್ದು, ಸಂಗೀತ ಕಛೇರಿ ರದ್ದಿಗೆ ಕಾರಣವಾದ ಶಿವಸೇನೆ ವಿರುದ್ಧ ಇದೀಗ ರಾಜಕೀಯ ನಾಯಕರು ಹಾಗೂ ಸಾಂಸ್ಕೃತಿಕ ಸಂಸ್ಥೆ ಕಿಡಿಕಾರುತ್ತಿರುವ ಹಿನ್ನೆಲೆಯಲ್ಲಿ...
ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ (ಸಂಗ್ರಹ ಚಿತ್ರ)
ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ (ಸಂಗ್ರಹ ಚಿತ್ರ)

ಮುಂಬೈ: ಪಾಕಿಸ್ತಾನದ ಖ್ಯಾತ ಘಜಲ್ ಗಾಯಕ ಗುಲಾಂ ಅಲಿ ಅವರ ಸಂಗೀತ ಕಛೇರಿ ರದ್ದು ವಿಚಾರ ಇದೀಗ ವಿವಾದಕ್ಕೆ ತಿರುಗಿದ್ದು, ಸಂಗೀತ ಕಛೇರಿ ರದ್ದಿಗೆ ಕಾರಣವಾದ ಶಿವಸೇನೆ ವಿರುದ್ಧ ಇದೀಗ ರಾಜಕೀಯ ನಾಯಕರು ಹಾಗೂ ಸಾಂಸ್ಕೃತಿಕ ಸಂಸ್ಥೆ ಕಿಡಿಕಾರುತ್ತಿರುವ ಹಿನ್ನೆಲೆಯಲ್ಲಿ ಇದೀಗ ಶಿವಸೇನೆಯು ತನ್ನ ನಡೆಯನ್ನು ಗುರುವಾರ ಸಮರ್ಥಿಸಿಕೊಂಡಿದೆ.

ಗಡಿಯಲ್ಲಿ ಪಾಕಿಸ್ತಾನ ಸೈನಿಕರು ಭಾರತೀಯ ಯೋಧರ ಮೇಲೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದ್ದಾರೆ. ಭಾರತೀಯ ಸೈನಿಕರ ವಿಚಾರದಲ್ಲಿ ಪ್ರತಿಯೊಬ್ಬರು ಸೂಕ್ಷ್ಮತೆ ವಹಿಸಿರುವ ಅಗತ್ಯವಿದೆ ಎಂದು ಯುವಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಗುಲಾಂ ಅಲಿ ಅವರ ಸಂಗೀತ ಕಚೇರಿಯನ್ನು ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ಆದರೆ, ಈ ವಿಚಾರದಲ್ಲಿ ನಾವು ನಮ್ಮ ಸೈನಿಕರ ಬಗ್ಗೆಯೂ ಆಲೋಚಿಸುವ ಅಗತ್ಯವಿದೆ. ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಿರುವುದನ್ನು ಪ್ರತೀ ನಿತ್ಯ ಕೇಳುತ್ತಿರುತ್ತೇವೆ. ಗಡಿಯಲ್ಲಿ ನಮ್ಮ ಸೈನಿಕರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಸಂಗೀತ ಕಚೇರಿಯಿಂದ ನಾವು ಸಂಭ್ರಮ ಆಚರಿಸಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ಸಂಸ್ಕೃತಿ ಕೈಯಿಂದ ಕೈಯಿಗೆ ಹೋಗಲು ಸಾಧ್ಯವಿಲ್ಲ. ನಾವು ಎಂದಿಗೂ ಸಂಗೀತ ಅಥವಾ ಕಲೆ ವಿರುದ್ಧ ವಿರೋಧ ವ್ಯಕ್ತಪಡಿಸಿಲ್ಲ.ಆದರೆ, ಸೈನಿಕರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಂಗೀತ ಕಚೇರಿ ಬೇಡ ಎನ್ನುವುದಷ್ಟೇ ನಮ್ಮ ವಾದ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಭಯೋತ್ಪಾದನೆ ಚಟುವಟಿಕೆ ಇದೀಗ ಜಮ್ಮ ಮತ್ತು ಕಾಶ್ಮೀರ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಪಾಕಿಸ್ತಾನದಲ್ಲಿ ಭಯೋತ್ಪಾದನಾ ಚಟುವಟಿಕೆ ಅಂತ್ಯಗೊಳ್ಳುವವರೆಗೂ ಪಾಕಿಸ್ತಾನದೊಂದಿಗೆ ನಮ್ಮ ಮಾತು ಎಂದಿಗೂ ಸಾಧ್ಯವಿಲ್ಲ. ಭಯೋತ್ಪಾದನೆ ಅಂತ್ಯಗೊಳ್ಳುವವರೆಗೂ ಪಾಕಿಸ್ತಾನವನ್ನು ನಾವು ಆ ದೇಶವನ್ನು ಬಹಿಷ್ಕರಿಸುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.  

ಶುಕ್ರವಾರ ಮುಂಬೈಯ ಷಣ್ಮುಖಾನಂದ್ ಹಾಲ್ ನಲ್ಲಿ ಗುಲಾಂ ಅಲಿ ಅವರ ಸಂಗೀತ ಕಛೇರಿ ಯನ್ನು ಏರ್ಪಡಿಸಲಾಗಿತ್ತು.. ಹಲವಾರು ಬಾಲಿವುಡ್ ಗೀತೆಗಳನ್ನು ಹಾಡಿರುವ ಗುಲಾಂ ಅಲಿ, ಕಳೆದ ವರ್ಷ ವಾರಣಾಸಿ ಸಂಕಟ್ ಮೋಚನ್ ದೇಗುಲದಲ್ಲಿ ಸಂಗೀತ ಕಛೇರಿಯನ್ನು ನಡೆಸಿಕೊಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com