ಮದರ್ ತೆರೆಸಾ ಮಿಷನರೀಸ್ ಅನಾಥಾಲಯದ ಅಂಗೀಕಾರ ರದ್ದತಿಗೆ ಕೇಂದ್ರ ತೀರ್ಮಾನ?

ಮದರ್ ತೆರೆಸಾ ಅವರು ಆರಂಭಿಸಿದ್ದ ಮಿಷನರೀಸ್ ಆಫ್ ಚಾರಿಟಿಯಡಿಯಲ್ಲಿರುವ ಅನಾಥಾಲಯಗಳ ಅಂಗೀಕಾರ ರದ್ದು ಮಾಡಲು ಕೇಂದ್ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮದರ್ ತೆರೆಸಾ ಅವರು ಆರಂಭಿಸಿದ್ದ ಮಿಷನರೀಸ್ ಆಫ್ ಚಾರಿಟಿಯಡಿಯಲ್ಲಿರುವ ಅನಾಥಾಲಯಗಳ ಅಂಗೀಕಾರ ರದ್ದು ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. 
ದತ್ತು ಸ್ವೀಕಾರ ನಿಯಮ ನಿಬಂಧನೆಗಳನ್ನು ಪಾಲಿಸಲು ಒಪ್ಪದೇ ಇರುವ ಕಾರಣ ಈ ಅನಾಥಾಲಯಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿರುವುದಾಗಿ ಮಹಿಳೆ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.
ಒಂಟಿಯಾಗಿರುವ, ವಿಚ್ಛೇದನ ಪಡೆದಿರುವ ಅಥವಾ ಸಂಬಂಧದಿಂದ ಬೇರೆಯಾಗಿರುವ ವ್ಯಕ್ತಿಗಳಿಗೆ ಮಕ್ಕಳನ್ನು ದತ್ತು ನೀಡಬಹುದಾಗಿದೆ. ಆದರೆ ಈ ಚಾರಿಟಿಗಳು ಇಂಥವರಿಗೆ ದತ್ತು ನೀಡಲು ನಿರಾಕರಿಸಿವೆ. ಆದ್ದರಿಂದಲೇ ಈ ಚಾರಿಟಿ ನಡೆಸುತ್ತಿರುವ 13 ಅನಾಥಾಲಯಗಳ ಅಂಗೀಕಾರವನ್ನು ರದ್ದು ಮಾಡಲು ನಾವು ತೀರ್ಮಾನಿಸಿದ್ದೇವೆ. ಈ ಅನಾಥಾಲಯದಲ್ಲಿದ್ದ ಮಕ್ಕಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುವುದು ಎಂದು ಮನೇಕಾ ಗಾಂಧಿ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com