ಗುಜರಾತ್ ಮಾಡೆಲ್ ಹಿಂದಿನ ರಹಸ್ಯ ಶೀಘ್ರದಲ್ಲೇ ಬಹಿರಂಗ: ಹಾರ್ದಿಕ್ ಪಟೇಲ್

ಗುಜಾರಾತ್ ನಲ್ಲಿರುವ ರೈತರು ಬಹಳ ಸಂತೋಷದಿಂದ ಇದೆ ಎಂದು ಸರ್ಕಾರ ಹೇಳುತ್ತಿದೆ. ರೈತರು ನಿಜಕ್ಕೂ ಸಂತೋಷದಲ್ಲಿದ್ದರೆ ಇಲ್ಲಿರುವ ರೈತರು ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಿದ್ದಾರೆ...
ಪಟೇಲ್ ಮೀಸಲಾತಿ ಹೋರಾಟ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್ (ಸಂಗ್ರಹ ಚಿತ್ರ)
ಪಟೇಲ್ ಮೀಸಲಾತಿ ಹೋರಾಟ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್ (ಸಂಗ್ರಹ ಚಿತ್ರ)

ಗಾಂಧೀನಗರ: ಗುಜಾರಾತ್ ನಲ್ಲಿರುವ ರೈತರು ಬಹಳ ಸಂತೋಷದಿಂದ ಇದೆ ಎಂದು ಸರ್ಕಾರ ಹೇಳುತ್ತಿದೆ. ರೈತರು ನಿಜಕ್ಕೂ ಸಂತೋಷದಲ್ಲಿದ್ದರೆ ಇಲ್ಲಿರುವ ರೈತರು ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಗುಜರಾತ್ ಅಭಿವೃದ್ಧಿ ಮಾಡೆಲ್ ಹಿಂದಿರುವ ರಹಸ್ಯವನ್ನು ಬಹಿರಂಗಪಡಿಸುತ್ತೇನೆಂದು ಪಟೇಲ್ ಮೀಸಲಾತಿ ಹೋರಾಟ ಸಮಿತಿ ಮುಖ್ಯಸ್ಥ ಹಾರ್ದಿಕ್ ಪಟೇಲ್ ಶನಿವಾರ ಹೇಳಿದ್ದಾರೆ.

ಈ ಕುರಿತಂತೆ ಪಟೇಲ್ ಮೀಸಲಾತಿ ಹೋರಾಟ ಸಮಿತಿಯ ಮುಂದಿನ ಹೋರಾಟದ ರೂಪರೇಷೆಗಳ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿರುವ ಅವರು, ಗುಜರಾತ್ ನಿಜಕ್ಕೂ ಅಭಿವೃದ್ಧಿಯ ಮಾದರಿ ರಾಜ್ಯವಾಗುತ್ತಿದ್ದರೆ ಇಲ್ಲಿರುವ ರೈತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿರುವ ರೈತರು ಸಂತೋಷದಲ್ಲಿದ್ದಾರೆ ಎಂದು ಗುಜರಾತ್ ಸರ್ಕಾರ ಹೇಳುತ್ತಿದೆ. ಹಾಗಾದರೆ ಕಳೆದ ಒಂದು ವಾರದಲ್ಲಿಯೇ ಗುಜರಾತ್ ನಲ್ಲಿ ಇಬ್ಬರು ರೈತರು ಯಾಕೆ ಆತ್ಮಹತ್ಯೆಗೆ ಶರಣಾದರು. ಗುಜರಾತ್ ನಲ್ಲಿ ಇಂತಹ ಅನೇಕ ಉದಾಹರಣೆಗಳು ಇಂದು ನಮ್ಮ ಕಣ್ಣ ಮುಂದೆ ಸಿಗುತ್ತದೆ ಎಂದು ಹೇಳಿದ್ದಾರೆ.

ಉದ್ಯೋಗ ನೇಮಕಾತಿ ಅವ್ಯವಹಾರದಲ್ಲಿ ಭಾಗಿಯಾದವರ ಬಗ್ಗೆ ಗುಜರಾತ್ ಸರ್ಕಾರ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಪೊಲೀಸರು ಮುಗ್ದ ಮಹಿಳೆಯರ ಮೇಲೆ ಹಲ್ಲೆ ಮಾಡಿ ಯಾಕೆ ಜೈಲಿಗೆ ಕಳುಹಿಸುತ್ತಿದ್ದಾರೆ? ಈ ಎಲ್ಲಾ ಘಟನೆಗಳನ್ನು ಗಮನಿಸಿದರೆ ಗುಜರಾತ್ ಮಾಡೆಲ್‌ ಆಗಿ ನಿರ್ಮಾಣವಾಗಿದೆಯೇ ಎಂಬ ಹಲವು ಪ್ರಶ್ನೆಗಳು ಮೂಡುತ್ತವೆ. ಇಲ್ಲಿನ ಅಧಿಕಾರಿಗಳು ಪಟೇಲ್ ಸಮುದಾಯದ ಜನರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಗುಜರಾತ್ ಸರ್ಕಾರ ತನ್ನ ಲಾಭಕ್ಕಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ತಡೆಗೆ ಸುಗ್ರೀವಾಜ್ಞೆ ಹೊರಡಿಸಿದೆ.

ಇದು ಮಾದರಿ ಗುಜರಾತೇ? ಗುಜರಾತ್ ಮಾಡೆಲ್ ಎನ್ನುವುದು ಸುಳ್ಳು. ಗುಜರಾತ್ ಮಾಡಲೆ ಹಿಂದಿರುವ ರಹಸ್ಯ ಬೇರೆಯೇ ಇದೆ. ವಾಸ್ತವದಲ್ಲಿರುವ ಗುಜರಾತ್ ಬೇರೆಯೇ ಆಗಿದೆ. ಗುಜರಾತ್ ಮಾಡೆಲ್ ಬಗ್ಗೆ ಅನಗತ್ಯವಾಗಿ ಬಿಜೆಪಿ ನಾಯಕರು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ. ಇದು ನಿಜಕ್ಕೂ ಸತ್ಯಕ್ಕೆ ದೂರವಾಗಿದೆ. ಶೀಘ್ರದಲ್ಲೇ ಗುಜರಾತ್ ಮಾಡಲೆ ಹಿಂದಿರುವ ಸತ್ಯ ಸಂಗತಿಯನ್ನು ಬಹಿರಂಗಪಡಿಸುತ್ತೇನೆಂದು ಹಾರ್ದಿಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com