ಅಭಿವೃದ್ಧಿ ವಿಚಾರ ಬದಿಗೆ ಸರಿಸುತ್ತಿರುವ ಜೆಡಿಯು ಮೈತ್ರಿಕೂಟ: ನಾಯ್ಡು ಆರೋಪ

ಜೆಡಿಯು, ಆರ್ ಜೆಡಿ ಹಾಗೂ ಕಾಂಗ್ರೆಸ್‍ನ ಮಹಾಮೈತ್ರಿಕೂಟವು ಅಭಿವೃದ್ಧಿ ವಿಚಾರವನ್ನು ಬದಿಗಿಟ್ಟು ದಾದ್ರಿ ಪ್ರಕರಣವನ್ನೇ ಬಿಹಾರ...
ವೆಂಕಯ್ಯನಾಯ್ಡು
ವೆಂಕಯ್ಯನಾಯ್ಡು
ನವದೆಹಲಿ: ಜೆಡಿಯು, ಆರ್ ಜೆಡಿ ಹಾಗೂ ಕಾಂಗ್ರೆಸ್‍ನ ಮಹಾಮೈತ್ರಿಕೂಟವು ಅಭಿವೃದ್ಧಿ ವಿಚಾರವನ್ನು ಬದಿಗಿಟ್ಟು ದಾದ್ರಿ ಪ್ರಕರಣವನ್ನೇ ಬಿಹಾರ ಚುನಾವಣೆಯಲ್ಲಿ ಪ್ರಮುಖವಾಗಿ ಬಿಂಬಿಸಲು ಹೊರಟಿದೆ ಎಂದು ಬಿಜೆಪಿ ಆರೋಪಿಸಿದೆ. 
ಬಿಹಾರದಲ್ಲಿ ಬಿಜೆಪಿ ಮುಖ್ಯ ಅಜೆಂಡಾ ಅಭಿವೃದ್ಧಿಯೇ ಆಗಿದೆ. ಆ ರಾಜ್ಯಕ್ಕೆ ಉತ್ತಮ ಆಡಳಿತದ ತುರ್ತು ಅವಶ್ಯಕತೆ ಇದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಪ್ರಧಾನಿಯವರ ಶೈತಾನ್ ಪದ ಬಳಕೆಗೂ ಸ್ಪಷ್ಟನೆ ನೀಡಿದ್ದಾರೆ. 
`ಶೈತಾನ್'ನಂಥ ಪದಗಳನ್ನು ಪರಿಚಯಿಸಿದ್ದು ಬಿಜೆಪಿಯಾಗಲಿ, ಮೋದಿಯಾಗಲಿ ಅಲ್ಲ. ನಿತೀಶ್, ಲಾಲೂ ಅವರು ಪರಸ್ಪರ ಈ ಪದವನ್ನು ಬಳಸಿಕೊಂಡು ಬೈದಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com