ಬಿಹಾರ ವಿಧಾನಸಭಾ ಚುನಾವಣೆ: 3 ಗಂಟೆ ವೇಳೆಗೆ ಶೇ.50ರಷ್ಟು ಮತದಾನ

ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಸೋಮವಾರ ಬೆಳಿಗ್ಗೆ ಚುರುಕಿನಿಂದ ಆರಂಭವಾಗಿದ್ದು, ಶೇ.50ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ...
ಬಿಹಾರ ಚುನಾವಣೆ: ಶೇ.33ರಷ್ಟು ಮತಾದಾನ
ಬಿಹಾರ ಚುನಾವಣೆ: ಶೇ.33ರಷ್ಟು ಮತಾದಾನ

ಪಾಟ್ನ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಸೋಮವಾರ ಬೆಳಿಗ್ಗೆ ಚುರುಕಿನಿಂದ ಆರಂಭವಾಗಿದ್ದು, ಮಧ್ಯಾಹ್ನದ ವೇಳೆ ಶೇ.50ರಷ್ಟು ಪ್ರಮಾಣದಲ್ಲಿ ಮತದಾನ ನಡೆದಿದೆ.

ಇಂದು ನಡೆಯುತ್ತಿರುವ ಮತದಾನದಲ್ಲಿ 49 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು. ಇದುವರೆಗೆ ಯಾವುದೇ ಬಗೆಯ ಅಹಿತಕರ ಘಟನೆಗಳು ವರದಿಯಾಗಿಲ್ಲ. ಆದರೆ, ಗಸ್ತುನಲ್ಲಿ ದ್ವಿಚಕ್ರವಾಹನದಲ್ಲಿ ತಿರುಗುತ್ತಿದ್ದ ಇಬ್ಬರು ಭದ್ರತಾ ಅಧಿಕಾರಿಗಳು ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡಿದ್ದು, ಕೂಡಲೇ ಅವರನ್ನು ಸದಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು. ಮಧ್ಯಾಹ್ನದ ವೇಳೆಗೆ ಗರಿಷ್ಠ ಶೇ.50 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಆಯೋಗದ ಮಾಹಿತಿಯ ಪ್ರಕಾರ ಸಮಸ್ತಿಪುರದಲ್ಲಿ ಶೇ.31.79, ಬೇಗುಸರಾಯ್ 34.05, ಖಗರಿಯಾ 30.55, ಬಾಗಲ್ಪುರ 30.96, ಬಂಕಾ 36.99, ಮುಂಗರ್ 32.22, ಲಕ್ಷಿಸರಾಯ್ 34.76, ಶೇಖ್ಪುರ 32.47, ನವಾಡ 32.20ರಲ್ಲಿ ಶೇಕಡಾವಾರು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,35,72,339 ಇದ್ದು, ಅದರಲ್ಲಿ  72,37,253 ಪುರುಷರಿದ್ದರೆ, ಮಹಿಳೆಯರ ಸಂಖ್ಯೆ 63,17,602  ಉಳಿದಂತೆ ತೃತೀಯ ಲಿಂಗಿಗಳ ಸಂಖ್ಯೆ 405 ಇದೆ.  ಈ ಮತದಾರರು ಮೊದನೇ ಸುತ್ತಿನ ಮತದಾನದಲ್ಲಿ ಮತಚಲಾಯಿಸುತ್ತಿದ್ದು, ಚುನಾವಣಾ ಕಣದಲ್ಲಿರುವ ಒಟ್ಟು 583 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧಾರವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com