ಹಿಂದೂ ಧರ್ಮಕ್ಕೆ 300 ಕ್ರೈಸ್ತರ 'ಘರ್ ವಾಪಸಿ'

ವಾರಣಾಸಿಯ ಔಸಾನ್ ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಸುಮಾರು 300 ಮಂದಿ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಸೋಮವಾರ ನಡೆದಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ವಾರಾಣಾಸಿ: ವಾರಣಾಸಿಯ ಔಸಾನ್ ಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದ ಮೂಲಕ ಸುಮಾರು 300 ಮಂದಿ ಕ್ರಿಶ್ಚಿಯನ್ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಘಟನೆ ಸೋಮವಾರ ನಡೆದಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿದೆ.

ಕೆಲವು ವರ್ಷಗಳ ಹಿಂದಷ್ಟೇ ಈ ಗ್ರಾಮದಲ್ಲಿ ಸ್ಥಾಪನೆಗೊಂಡಿದ್ದ ಚರ್ಚ್ ವೊಂದು ಗ್ರಾಮದ ಹಿಂದೂಗಳಲನ್ನು ತಮ್ಮ ಧರ್ಮಕ್ಕೆ ಮತಾಂತರಿಸಿತ್ತು. ಇದೀಗ ಧರ್ಮ ಜಾಗರಣ್ ಸಮನ್ವಯ್ ಸಮಿತಿ ಇವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಕರೆ ತಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಕಾರ್ಯಕ್ರಮದಲ್ಲಿ  ಹಿಂದೂ ಧರ್ಮಕ್ಕೆ ಮತಾಂತರವಾದವರನ್ನೆಲ್ಲಾ ಶುದ್ದೀಕರಣ ಮಾಡಿ ಅವರಿಗೆ ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾ ಪುಸ್ತಕ ನೀಡಿ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

ಮತಾಂತರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಾಪಾಸಿಗೊಂಡ ಗ್ರಾಮಸ್ಥರೊಬ್ಬರು, ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಚರ್ಚ್ ವೊಂದು ನಿರ್ಮಾಣವಾಗಿತ್ತು. ಚರ್ಚ್ ನೋಡಲು ಪ್ರತೀದಿನ ನೂರಾರು ಕುಟುಂಬಗಳು ಭೇಟಿ ನೀಡುತ್ತಿದ್ದರು. ಹೀಗೆಯೇ ಪ್ರಾರ್ಥನೆ ಮಾಡಲೆಂದು ಪ್ರತೀ ವಾರ ಚರ್ಚ್ ಗೆ ಹೋಗುತ್ತಿದ್ದರು. ಹೀಗೆ ಚರ್ಚ್ ಹೋಗುತ್ತಿದ್ದವರನ್ನು ಗ್ರಾಮದಲ್ಲಿರುವ ಕೆಲವರು ಮತಾಂತರಗೊಂಡಿದ್ದಾರೆಂದು ಹೇಳಲು ಪ್ರಾರಂಭಿಸಿದ್ದರು. ಚರ್ಚ್ ಗೆ ಹೋಗುತ್ತಿದ್ದವರಲ್ಲಿ ಸಾಕಷ್ಟು ಮಂದಿ ದಲಿತರಾಗಿದ್ದರು. ನಾವು ನಮ್ಮ ನಂಬಿಕೆಯನ್ನು ಬದಲಾಯಿಸಿಕೊಂಡಿದ್ದೆವೆಯೇ ಹೊರತು ಧರ್ಮವನಲ್ಲ. ಧರ್ಮವನ್ನು ತೊರೆದರೆ ಎಸ್ ಸಿಗಳಿಗೆ ಸಿಗುವ ಸೌಲಭ್ಯದಿಂದ ವಂಚಿತರಾಗುತ್ತೇವೆ ಎಂಬ ಭಯ ನಮಗಿತ್ತು. ಎಂದು ಘರ್ ವಾಪಾಸಿಗೊಂಡ ಗ್ರಾಮಸ್ಥರೊಬ್ಬರು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com