ದೇಶದ ಭದ್ರ ಅಡಿಪಾಯ ಧ್ವಂಸ ಅಸಾಧ್ಯ: ಸೆಹೆಗಲ್

ಆಧುನಿಕ ಭಾರತದ ಅಡಿಪಾಯ ಪ್ರಬಲ ತತ್ವಗಳಿಂದ ನಿರ್ಮಿತವಾದದ್ದು. ಇದು ಮಹಾತ್ಮ ಗಾಂಧಿ ನೇತೃತ್ವದ ರಾಷ್ಟ್ರೀಯ ಚಳವ ಳಿಯ ಫಲ. ಇದನ್ನು ಅಷ್ಟು...
ನಯನತಾರಾ ಸೆಹೆಗಲ್
ನಯನತಾರಾ ಸೆಹೆಗಲ್
Updated on
ನವದೆಹಲಿ: `'ಆಧುನಿಕ ಭಾರತದ ಅಡಿಪಾಯ ಪ್ರಬಲ ತತ್ವಗಳಿಂದ ನಿರ್ಮಿತವಾದದ್ದು. ಇದು ಮಹಾತ್ಮ ಗಾಂಧಿ ನೇತೃತ್ವದ ರಾಷ್ಟ್ರೀಯ ಚಳವ ಳಿಯ ಫಲ. ಇದನ್ನು ಅಷ್ಟು ಸುಲಭದಲ್ಲಿ ಧ್ವಂಸ ಮಾಡಲು ಸಾಧ್ಯವಾಗದು''. ಸಂಶೋಧಕ ಎಂ ಎಂ ಕಲಬುರ್ಗಿ, ದಾದ್ರಿ ಘಟನೆ ಖಂಡಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಿಂದಿರುಗಿಸಿದ ಖ್ಯಾತ ಲೇಖಕಿ, ನೆಹರೂರ ಸೋದರಸೊಸೆ ನಯನತಾರಾ ಸೆಹೆಗಲ್ ಅವರ ಮನದಾಳದ ಮಾತಿದು. ಇಂಡಿಯನ್ ಎಕ್ಸ್ಪ್ರೆಸ್‍ಗೆ ನೀಡಿದ ಸಂದರ್ಶ ನದಲ್ಲಿ ಸೆಹೆಗಲ್ ಹಲವು ವಿಚಾರಗಳ ಬಗ್ಗೆಚರ್ಚಿಸಿದ್ದಾರೆ. ``ನಾನೊಬ್ಬ ಆಶಾವಾದಿ, ಸಮಾಜವಾದಿ. ಭೂಕಂಪವು ಕಟ್ಟಡದ ಮೇಲ್ಭಾಗವನ್ನು ಧ್ವಂಸಗೊಳಿಸಬಹುದು. ಆದರೆ, ಭದ್ರ ಅಡಿಪಾಯವನ್ನು ಅಲುಗಿಸುವು ದು ಸುಲಭವಲ್ಲ. ಈ ಅಡಿಪಾಯದ ಮೇಲಾಗುತ್ತಿರುವ ದಾಳಿಯ ಬಗ್ಗೆ ನನಗೆ ತೀವ್ರ ನೋವಿದೆ. ಆದರೆ, ಭಾರತೀಯರು ಎಂದಿಗೂ ತಮ್ಮ ಜಾತ್ಯತೀತತೆ ಬಿಟ್ಟುಕೊಡಲಾ ರರು. ಈಗ ನಡೆಯುತ್ತಿರುವ ದಾಳಿಗಳ ನ್ನು ದೊಡ್ಡ, ಧ್ವನಿಯಿಂದ ಖಂಡಿಸಬೇಕು. ಹೀಗೆ ನಿಂತು, ಖಂಡಿಸಿದ ಎಷ್ಟೋ ಉದಾಹರ ಣೆಗಳು ಇತಿಹಾಸದಲ್ಲಿ ಕಾಣಸಿಗುತ್ತವೆ. ಇದೂ ಅಂಥದ್ದರಲ್ಲಿ ಒಂದು'' ಎಂದಿದ್ದಾರೆ ಮೋದಿ ಸರ್ಕಾರವನ್ನು ಆರೆಸ್ಸೆಸ್ ಸರ್ಕಾರ ವೆಂದೇ ಕರೆದ ಸೆಹೆಗಲ್, ಬಿಜೆಪಿ ಮತ್ತು ಆರೆಸ್ಸೆಸ್ ನಡುವೆ ವ್ಯತ್ಯಾಸವೇನೂ ಇಲ್ಲ ಎಂದಿದ್ದಾರೆ. ವಂಶಾಡಳಿತದ ಬಗೆಗಿನ ಪ್ರಶ್ನೆಗೆ, `ಇಂದಿರಾ ಅವರು ಸಂಜೀವ್ರನ್ನು ಉತ್ತರಾಧಿಕಾರಿಯನ್ನಾಗಿ ನೇಮಸಿದಾಗಲೇ ನಾನು ವಂಶಾ ಡಳಿತ ವಿರೋಧಿಸಿದ್ದೆ. ರಾಹುಲ್, ಪ್ರಿಯಾಂಕಾರನ್ನೂ ನಾನು ನಾಯಕರೆಂದು ಪರಿಗಣಿಸಿಲ್ಲ. ವಂಶಾಡಳಿತದಲ್ಲಿ ನನಗೆ ನಂಬಿಕೆಯಿಲ್ಲ' ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com