ಬಾದಲ್‍ರನ್ನು ಮಂಡೇಲಾಗೆ ಹೋಲಿಸಿದ ಪ್ರಧಾನಿ ಮೋದಿ

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು `ಭಾರತದ ನೆಲ್ಸನ್ ಮಂಡೇಲಾ' ಎಂದು ಕರೆವ ಮೂಲಕ ಪ್ರಧಾನಿ ಮೋದಿ ಸಾಮಾಜಿಕ ...
ಪ್ರಧಾನಿ ನರೇಂದ್ರ ಮೋದಿ ಜತೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್  (ಕೃಪೆ: ಪಿಟಿಐ)
ಪ್ರಧಾನಿ ನರೇಂದ್ರ ಮೋದಿ ಜತೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ (ಕೃಪೆ: ಪಿಟಿಐ)
ನವದೆಹಲಿ:  ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು `ಭಾರತದ ನೆಲ್ಸನ್ ಮಂಡೇಲಾ' ಎಂದು ಕರೆವ ಮೂಲಕ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯಕ್ಕೆ ಸಾಕಷ್ಟು ಸರಕು ಒದಗಿಸಿದ್ದಾರೆ. ದೆಹಲಿಯಲ್ಲಿ ನಡೆದ ಜೆಪಿ ಸಂಸ್ಮ ರಣೆ ಸಭೆಯಲ್ಲಿ ಮೋದಿ ಈ ಮಮಾತು ಹೇಳಿದ್ದರು. ಸಭೆಯಲ್ಲಿ ಬಾದಲ್ ಇದ್ದರು. `ಬಾದಲ್ ಸಾಹೇಬ್ ಇಲ್ಲಿದ್ದಾರೆ. ಅವರು ಭಾರತದ ನೆಲ್ಸನ್ ಮಂಡೇಲಾ. ಇಂಥ ವ್ಯಕ್ತಿಗಳ ಏಕೈಕ ಅಪರಾಧ ಎಂದರೆ, ಪ್ರಭುತ್ವ ದಲ್ಲಿರುವವರಿಗಿಂತ ಬಿsನ್ನ ರಾಜಕೀಯ ನಿಲುವು ಹೊಂದಿರುವುದು' ಎಂದಿ ದ್ದರು. ಬಾದಲ್ 2 ದಶಕ ಜೈಲಿನಲ್ಲಿ ಕಳೆದವರೆಂದು ಸ್ಮರಿಸಿದ್ದರು. ಇದು ಟ್ವಿಟರ್‍ನಲ್ಲಿ ಸಾಕಷ್ಟು ಅಣಕಕ್ಕೆ ಕಾರಣವಾಗಿದೆ. `ಬಾದಲ್ ಮಂಡೇಲಾ ಆದರೆ, ರಾಹುಲ್ ಐನ್ ಸ್ಟೀನ್ ಅಂತ ಸೋನಿಮಾ ಹೇಳ ಬಹುದು' ಎಂದು ಒಬ್ಬರು ಹೇಳಿದ್ದರೆ,  `ಬಾದಲ್ ಸರ್ಕಾರದಡಿ ರೈತರು ಸಾಯುತ್ತಿದ್ದಾರೆ, ಶೇ.70 ಯುವಕರು ಡ್ರಗ್ಸ್ ದಾಸರಾಗುತ್ತಿದ್ದಾರೆ. ಇಂಥ ವರನ್ನು ಮೋದಿ ಮಂಡೇಲಾ ಅನ್ನುತ್ತಿ ದ್ದಾರೆ' ಎಂದು ಕಾಂಗ್ರೆಸ್ ಟೀಕಿಸಿದೆ. ಇದೇ ವೇಳೆ, `ಈ ಹೇಳಿಕೆ ಮೂಲಕ ತನಗೂ ರಾಹುಲ್‍ಗೂ ವ್ಯತ್ಯಾಸವಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ' ಎಂದು ಕೆಲವರಂದಿದ್ದಾರೆ.
ಹೊಸ ರಾಜಕೀಯದ ಹುಟ್ಟು: ತುರ್ತು ಪರಿಸ್ಥಿತಿಯು ದೇಶದ ಪ್ರಜಾ ಪ್ರಭುತ್ವಕ್ಕೆ ಅತೀ ದೊಡ್ಡ ಹೊಡೆತ. ಈ ಅವಧಿಯಲ್ಲಿ ದೇಶದಲ್ಲಿ ಉಂಟಾದ ಬಿಕ್ಕಟ್ಟು ಭಾರತದ ಪ್ರಜಾಸತ್ತೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿತು. ತುರ್ತು ಪರಿಸ್ಥಿತಿ ವಿರುದ್ಧದ  ಹೋರಾಟವು ಹೊಸ ತಲೆಮಾರಿನ ನಾಯಕಪು ಮತ್ತು  ಹೊಸ ರಾಜಕೀಯದ ಹುಟ್ಟಿಗೆ ಕಾರಣ ವಾದವು. ಹಾಗಾಗಿ, ಅದರ ನೆನಪನ್ನುಜೀವಂತವಾಗಿಡಬೇಕು ಎಂದೂ ಮೋದಿ ಹೇಳಿದ್ದಾರೆ. ಇದಕ್ಕೂ ಮುನ್ನ ಅವರು, ಮಾಜಿ ಪ್ರಧಾನಿ ವಾಜಪೇಯಿ ಹಾಗೂ ಎನ್ಡಿಎ ಮಾಜಿಸಂಚಾಲಕ ಜಾರ್ಜ್ ಫರ್ನಾಂಡಿಸ್
ನಿವಾಸಕ್ಕೆ ತೆರಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com