ನವದೆಹಲಿ: ದಾದ್ರಿ ಪ್ರಕರಣ ಒಂದು ಚಿಕ್ಕ ಘಟನೆ ಎಂದು ಹೇಳುವ ಮೂಲಕ ಭಾರತೀಯ ಜನತಾ ಪಕ್ಷದ(ಬಿಜೆಪಿ) ಸಂಸದ ಸತ್ಯಪಾಲ್ ಸಿಂಗ್ ವಿವಾದಕ್ಕೆ ಸಿಲುಕಿದ್ದಾರೆ.
ಮುಂಬೈನ ಮಾಜಿ ಪೊಲೀಸ್ ಆಯುಕ್ತ ಹಾಗೂ ಪ್ರಸ್ತುತ ಬಿಜೆಪಿ ಸಂಸದರಾಗಿರುವ ಸತ್ಯಪಾಲ್ ಸಿಂಗ್ ಅವರು, ಇತರ ಆಂತರಿಕ ಭದ್ರತಾ ಸಮಸ್ಯೆಗಳಿಗೆ ಹೋಲಿಸಿಕೊಂಡರೆ, ಭಾರತ ದಾದ್ರಿ ಪ್ರಕರಣದಂತಹ ಚಿಕ್ಕ ಚಿಕ್ಕ ಘಟನೆಗಳನ್ನು ನಿರ್ವಹಣೆ ಮಾಡುವುದರಲ್ಲಿ ಯಶಸ್ಸು ಕಂಡಿದೆ ಎಂದು ಹೇಳಿದ್ದಾರೆ.
ಸತ್ಯಪಾಲ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸತ್ಯಪಾಲ್ ಹೇಳಿಕೆಯನ್ನು ನೋಡಿದರೆ ತಿಳಿಯುತ್ತದೆ ಬಿಜೆಪಿಯ ದೃಷ್ಟಿಕೋನ ಏನು ಎಂಬುದು ಎಂದು ಕಾಂಗ್ರೆಸ್ ಮುಖಂಡ ಅಜಾಯ್ ಕುಮಾರ್ ಕಿಡಿ ಕಾರಿದ್ದಾರೆ.
ಉತ್ತರ ಪ್ರದೇಶ ದಾದ್ರಿ ಎಂಬ ಊರಿನಲ್ಲಿ ಹಸುಗಳನ್ನು ಮುಸ್ಲಿಂ ಕುಟುಂಬವೊಂದು ಹತ್ಯೆ ಮಾಡಿ ಸೇವನೆ ಮಾಡಿದೆ ಎಂದು ಶಂಕಿಸಿದ ಗುಂಪೊಂದು ಮುಸ್ಲಿಂ ಕುಟುಂಬದ ಮೇಲೆ ದಾಳಿ ಮನೆಯಲ್ಲಿದ್ದ ಮಹಮ್ಮದ್ ಇಕ್ಲಾಕ್ (50) ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿತ್ತು.