ಲಾಡೆನ್ ಪಾಕ್‌ನಲ್ಲಿದ್ದಿದ್ದು ಅಲ್ಲಿನ ಹಿರಿಯ ನಾಯಕರಿಗೆ ಗೊತ್ತಿತ್ತು: ಮಾಜಿ ಸಚಿವ

ವಿಶ್ವದ ಮೊಸ್ಟ್ ವಾಂಟೆಡ್ ಉಗ್ರ, ಅಲ್‌ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದ...
ಒಸಾಮಾ ಬಿನ್‌ ಲಾಡೆನ್‌
ಒಸಾಮಾ ಬಿನ್‌ ಲಾಡೆನ್‌

ನವದೆಹಲಿ: ವಿಶ್ವದ ಮೊಸ್ಟ್ ವಾಂಟೆಡ್ ಉಗ್ರ, ಅಲ್‌ಖೈದಾ ನಾಯಕ ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದ ಅಬೋಟಾಬಾದ್‌ ಬಂಗಲೆಯಲ್ಲಿದ್ದದ್ದು ಅಲ್ಲಿನ ಹಿರಿಯ ನಾಯಕರಿಗೆ ಗೊತ್ತಿತ್ತು ಎಂದು ಪಾಕ್ ಮಾಜಿ ರಕ್ಷಣಾ ಸಚಿವ ಚೌಧರಿ ಅಹ್ಮದ್ ಮುಖ್ತಾರ್ ಹೇಳಿದ್ದಾರೆ.

ಆಗಿನ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಸೇನಾ ಮುಖ್ಯಸ್ಥರಾಗಿದ್ದ ಅಶ್ರಫ್ ಪರ್ವೇಜ್ ಕಯಾನಿ ಮತ್ತು ಇತರೆ ಹಿರಿಯ ಅಧಿಕಾರಿಗಳಿಗೆ ಲಾಡೆನ್ ಪಾಕಿಸ್ತಾನದಲ್ಲಿರುವ ಬಗ್ಗೆ ಮಾಹಿತಿ ಇತ್ತು ಎಂದು ಆಗ ರಕ್ಷಣಾ ಸಚಿವರಾಗಿದ್ದ ಮುಖ್ತಾರ್ ಸಿಎನ್ಎನ್-ಐಬಿಎನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಪಾಕ್‌ನಲ್ಲಿ ಲಾಡೆನ್‌ ಇದ್ದ ಎಂಬುದು ನಮಗೆ ಗೊತ್ತೇ ಇರಲಿಲ್ಲ ಎಂದು ಅಲ್ಲಿನ ಆಡಳಿತ ತಿಪ್ಪೆಸಾರಿಸುತ್ತಾ ಬಂದಿದೆ. ಆದರೆ ಇದೆಲ್ಲ ಸುಳ್ಳು ಎಂಬುದು ಇದೀಗ ಅಲ್ಲಿನ ಮಾಜಿ ರಕ್ಷಣಾ ಸಚಿವರ ಹೇಳಿಕೆಯಿಂದ ಬಹಿರಂಗವಾಗಿದೆ.

ಒಸಾಮಾ ಇರುವಿಕೆ ಬಗ್ಗೆ ಪಾಕ್ ಆಡಳಿತಕ್ಕೆ ಗೊತ್ತಿತ್ತೇ ಎಂಬ ಪ್ರಶ್ನೆಗೂ ಉತ್ತರಿಸಿದ ಮುಖ್ತಾರ್, ಇದು ಅಧ್ಯಕ್ಷರಿಗೆ ಮತ್ತು ಕಯಾನಿ ಅವರಿಗೆ ತಿಳಿದಿತ್ತು' ಎಂದಿದ್ದಾರೆ. ಅಲ್ಲದೆ, ಅಲ್ಲದೇ ಭದ್ರತಾ ಪಡೆಗಳೂ ಆತನ ರಕ್ಷಣೆ ಬಗ್ಗೆ ಗಮನ ಹರಿಸಿದ್ದವು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com