ಪ್ರಧಾನಿ ಮೋದಿಗೆ ಪತ್ರ ಬರೆದ ಬೆಂಗಳೂರು ಬಾಲಕ

ಅರ್ಧಕ್ಕೆ ನಿಂತು ಹೋಗಿರುವ ಮೇಲ್ಸೇತುವೆ ಕಾಮಗಾರಿಯಿಂದ ಪ್ರತಿನಿತ್ಯ ಉಂಟಾಗುತ್ತಿರುವ ಟ್ರಾಫಿಕ ಸಮಸ್ಯೆ ಬಗ್ಗೆ ಬೆಂಗಳೂರಿನ 8 ವರ್ಷದ ಪೋರನೊಬ್ಬ ...
ಅಭಿನವ್
ಅಭಿನವ್

ನವದೆಹಲಿ: ಅರ್ಧಕ್ಕೆ ನಿಂತು ಹೋಗಿರುವ ಮೇಲ್ಸೇತುವೆ ಕಾಮಗಾರಿಯಿಂದ ಪ್ರತಿನಿತ್ಯ ಉಂಟಾಗುತ್ತಿರುವ ಟ್ರಾಫಿಕ ಸಮಸ್ಯೆ ಬಗ್ಗೆ ಬೆಂಗಳೂರಿನ 8 ವರ್ಷದ ಪೋರನೊಬ್ಬ ದೇಶದ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾನೆ.

ಯಶವಂತಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 3ನೇ ತರಗತಿ ವಿದ್ಯಾರ್ಥಿ ಅಭಿನವ್ ವಿದ್ಯಾರಣ್ಯಪುರದ ದೊಡ್ಡ ಬೊಮ್ಮಸಂದ್ರದಲ್ಲಿ ವಾಸವಾಗಿದ್ದಾರೆ. ಅಭಿನವ್ ತನ್ನ ಮನೆಯಿಂದ ಮೂರು ಕಿಮೀ ದೂರದಲ್ಲಿರುವ ಶಾಲೆಗೆ ಹೋಗಿ ಬರಲು ಸುಮಾರಿ 45 ನಿಮಿಷಗಳ ಕಾಲ ಸಮಯ ತೆಗೆಗದುಕೊಳ್ಳುತ್ತದೆ. ಗೊರಗುಂಟೆ ಪಾಳ್ಯದ ಜಂಕ್ಷನ್ ಸಮೀಪದ ಔಟರ್ ರಿಂಗ್ ರೋಡ್ ನಲ್ಲಿನ ರೈಲ್ವೆ ಕ್ರಾಸಿಂಗ್ ನಲ್ಲಿ ಅರ್ದಂಬರ್ಧ ನಿರ್ಮಾಣವಾಗಿರುವ ಫ್ಲೈ ಓವರ್ ನಿಂದಾಗಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ, ಇದನ್ನು ಬಗೆಹರಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು  ಪ್ರಧಾನಿ ಕಚೇರಿಗೆ ಇ-ಮೇಲ್ ಮಾಡಿದ್ದಾನೆ.

ನಿಧಾನಗತಿಯ ಕಾಮಗಾರಿಯಿಂದಾಗಿ ಜನರ ಆರೋಗ್ಯ ಮೇಲೆ ಮಾತ್ರ ಪರಿಣಾಮವಾಗುವುದಲ್ಲೇ, ನನ್ನ ವಿದ್ಯಾಭ್ಯಾಸದ ಮೇಲೂ ತೊಂದರೆಯಾಗುತ್ತಿದೆ ಎಂದು ಅಭಿನವ್ ಪತ್ರದಲ್ಲಿ ದೂರಿದ್ದಾನೆ.

ಇನ್ನು ಅಭಿನವ್ ಬರೆದ ಪತ್ರಕ್ಕೆ ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು, ಸಮಸ್ಯೆ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com