ಬಿಹಾರ ಚುನಾವಣೆ: 2ನೇ ಹಂತದ ಮತದಾನ ಆರಂಭ

ಈಗಾಗಲೇ ಸಾಕಷ್ಟು ಕುತೂಹಲಗಳನ್ನು ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಶುಕ್ರವಾರ ಆರಂಭವಾಗಿದ್ದು, 6 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಚುನಾವಣೆ ನಡೆಯುತ್ತಿದೆ...
ಬಿಹಾರ ಚುನಾವಣೆ: 2ನೇ ಹಂತದ ಮತದಾನ ಆರಂಭ
ಬಿಹಾರ ಚುನಾವಣೆ: 2ನೇ ಹಂತದ ಮತದಾನ ಆರಂಭ

ಪಾಟ್ನ: ಈಗಾಗಲೇ ಸಾಕಷ್ಟು ಕುತೂಹಲಗಳನ್ನು ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಶುಕ್ರವಾರ ಆರಂಭವಾಗಿದ್ದು, 6 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಚುನಾವಣೆ ನಡೆಯುತ್ತಿದೆ.

ಇಂದು ಬೆಳಿಗ್ಗೆ 7 ರಿಂದಲೇ ಆರಂಭವಾಗಿರುವ ಚುನಾವಣೆಯು ಕೈಮೂರ್, ರೋಹ್ತಾಸ್, ಅರ್ವಾಲ್, ಜೆಹಾನಾಬಾದ್, ಔರಂಗಾಬಾದ್ ಮತ್ತು ಗಯಾ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ. ಈ 6 ಜಿಲ್ಲೆಗಳು ನಕ್ಸಲ್ ಪೀಡಿತ ಪ್ರದೇಶವಾಗಿರುವುದರಿಂದ ಈಗಾಗೇಲ ಎಚ್ಚರಿಕೆ ಕ್ರಮ ಕೈಗೊಂಡಿರುವ ಚುನಾವಣಾ ಆಯೋಗವು ಪ್ರತೀ ಬಾರಿಯಂತೆ ಇಲ್ಲಿನ ಚುನಾವಣೆಯ ಸಮಯವನ್ನು ಕಡಿತಗೊಳಿಸಿದ್ದು ಸಂಜೆ 5ರ ಬದಲು ಮಧ್ಯಾಹ್ನ 3 ಗಂಟೆ, ಇನ್ನೂ ಕೆಲೆವೆಡೆ 4 ಗಂಟೆಗೆ ಮತದಾನ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಿದೆ.

ಮತದಾನಕ್ಕೆ ಯಾವುದೇ ತೊಂದರೆಯಾಗದಂತೆ ಹಾಗೂ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಈಗಾಗಲೇ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದು, 993 ತುಕಡಿಗಳನ್ನು ವಿವಿಧ ಭಾಗಗಳಲ್ಲಿ ನಿಯೋಜಿಸಿದೆ.

86,13,870 ಮತದಾರರು ಚುನಾವಣೆಯಲ್ಲಿ ಮತದಾನ ಮಾಡಲಿದ್ದು, 32 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 456 ಅಭ್ಯರ್ಥಿಗಳಲ್ಲಿ ಯಾರು ಜಯಭೇರಿ ಸಾಧಿಸುತ್ತಾರೆ ಎಂಬುದು ನಿರ್ಧಾರವಾಗಲಿದೆ.

ಇನ್ನುಳಿದಂತೆ ಚುನಾವಣೆಯಲ್ಲಿ ಹಮ್ ಪಕ್ಷದ ನಾಯಕ ಜೀತನ್ ರಾಂ ಮಾಂಝಿ ಪ್ರಮುಖರಾಗಿದ್ದು, ಮಾಂಝಿ ಈ ಚುನಾವಣೆಯಲ್ಲಿ 2 ಕ್ಷೇತ್ರಗಳಿಂದ ಸ್ಪರ್ಥಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com