ಮುಸ್ಲಿಮರಿಗೆ 'ಪಾಕ್' ಇದೆ, ಗೋವಾ ಕ್ರಿಶ್ಚಿಯನ್ನರು ಎಲ್ಲಿ ಹೋಗುತ್ತಾರೆ?: ಒಮರ್ ಅಬ್ದುಲ್ಲಾ ಪ್ರಶ್ನೆ

ಮುಸ್ಲಿಮರು ಭಾರತದಲ್ಲಿರಬೇಕಾದರೆ ಗೋಮಾಂಸ ತ್ಯಜಿಸಬೇಕೆಂಬ ಹರಿಯಾಣ ಮುಖ್ಯಮಂತ್ರಿಯ ಹೇಳಿಕೆಯನ್ನು ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದು, ಮುಸ್ಲಿಮರಿಗೆ ಪಾಕಿಸ್ತಾನಕ್ಕೆ ಹೋಗಲು ಟಿಕೆಟ್ ಸಿಗುತ್ತದೆ...
ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (ಸಂಗ್ರಹ ಚಿತ್ರ)
ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (ಸಂಗ್ರಹ ಚಿತ್ರ)

ಶ್ರೀನಗರ: ಮುಸ್ಲಿಮರು ಭಾರತದಲ್ಲಿರಬೇಕಾದರೆ ಗೋಮಾಂಸ ತ್ಯಜಿಸಬೇಕೆಂಬ ಹರಿಯಾಣ ಮುಖ್ಯಮಂತ್ರಿಯ ಹೇಳಿಕೆಯನ್ನು ಮಾಜಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವ್ಯಂಗ್ಯವಾಡಿದ್ದು, ಮುಸ್ಲಿಮರಿಗೆ ಪಾಕಿಸ್ತಾನಕ್ಕೆ ಹೋಗಲು ಟಿಕೆಟ್ ಸಿಗುತ್ತದೆ. ಆದರೆ, ಗೋವಾ ಕ್ರಿಶ್ಚಿಯನ್ನರನ್ನು ಎಲ್ಲಿಗೆ ಕಳುಹಿಸುತ್ತೀರಿ ಎಂದು ಶುಕ್ರವಾರ ಪ್ರಶ್ನಿಸಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ತಮ್ಮ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ದಯವಿಟ್ಟು ಯಾರಾದರೂ ಗೋವಾದ ಬಿಜೆಪಿ ಮುಖ್ಯಮಂತ್ರಿಯನ್ನು ಕೇಳಿ, ಗೋಮಾಂಸ ಸೇವನೆಯನ್ನು ಬಿಡದ ಗೋವಾದ ಕ್ರಿಶ್ಚಿಯನ್ನರು ಎಲ್ಲಿಗೆ ಹೋಗುತ್ತಾರೆ. ಅವರನ್ನು ಭಾರತದಲ್ಲಿಯೇ ಇರಲು ಅನುಮತಿ ಸಿಗುತ್ತದೆಯೇ? ಎಂದು ಕೇಳಿದ್ದರು.

ಶೇಖರ್ ಗುಪ್ತಾ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಒಮರ್ ಅಬ್ದುಲ್ಲಾ, ಇದು ಒಳ್ಳೆಯ ಪ್ರಶ್ನೆ. ಆದರೆ, ಈ ಪ್ರಶ್ನೆಗೆ ನಿಜಕ್ಕೂ ನಿಮಗೆ ಉತ್ತರ ಸಿಗುವುದಿಲ್ಲ. ಪಾಕಿಸ್ತಾನಕ್ಕೆ ಹೋಗಿ ಎಂದರೆ ಕನಿಷ್ಟ ಪಕ್ಷ ನಮಗೆ ಪಾಕಿಸ್ತಾನಕ್ಕೆ ಹೋಗಲು ಟಿಕೆಟ್ ಆದರೂ ಸಿಗುತ್ತದೆ. ಗೋವಾದಲ್ಲಿರುವ ಕ್ರಿಶ್ಚಿಯನ್ನರು ಗೋಮಾಂಸ ಬಿಡದಿದ್ದರೆ ಅವರನ್ನು ಎಲ್ಲಿಗೆ ಕಳುಹಿಸುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಖಾಸಗಿ ಪತ್ರಿಯೊಂದರಲ್ಲಿ ನೀಡಿದ್ದ ಸಂದರ್ಶನದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ನೀಡಿದ್ದ 'ಭಾರತದಲ್ಲಿ ಮುಸ್ಲಿಮರು ನೆಲೆಸಬೇಕೆಂದರೆ ಮೊದಲು ಗೋಮಾಂಸ ಸೇವನೆಯನ್ನು ಬಿಡಬೇಕು' ಎಂಬ ಹೇಳಿಕೆ ಇದೀಗ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಖಟ್ಟಾರ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಾದ್ಯಂತ ವ್ಯತಿರಿಕ್ತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com