ಭ್ರೂಣದೊಂದಿಗೆ ವ್ಯಾಪಾರ ನಡೆಸುತ್ತೀರಾ?

``ನೀವು(ಸರ್ಕಾರ) ಮಾನವನ ಭ್ರೂಣ ಇಟ್ಟುಕೊಂಡು ವ್ಯಾಪಾರ ಮಾಡಲು ಅನುವು ಮಾಡಿಕೊಡುತ್ತಿದ್ದೀರಾ''? ಇದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆ...
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)
ಸುಪ್ರೀಂ ಕೋರ್ಟ್ (ಸಂಗ್ರಹ ಚಿತ್ರ)

ನವದೆಹಲಿ: ``ನೀವು(ಸರ್ಕಾರ) ಮಾನವನ ಭ್ರೂಣ ಇಟ್ಟುಕೊಂಡು ವ್ಯಾಪಾರ ಮಾಡಲು ಅನುವು ಮಾಡಿಕೊಡುತ್ತಿದ್ದೀರಾ''? ಇದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕೇಳಿದ ಪ್ರಶ್ನೆ.

ದೇಶದಲ್ಲಿ ವಾಣಿಜ್ಯಾತ್ಮಕವಾಗಿ ಬಾಡಿಗೆತಾಯಿ ಮೂಲಕ ಮಗು ಪಡೆಯಲು ಯಾವುದೇ ಅವ ಕಾಶವಿಲ್ಲ. ಆದರೂ ಎಗ್ಗಿಲ್ಲದೇ ಬಾಡಿಗೆತಾಯಿ ವ್ಯಾಪಾರ ನಡೆಯುತ್ತಿದೆ ಎಂದು ಆತಂಕ
ವ್ಯಕ್ತಪಡಿಸಿತು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಂಜನ್ ಗೋಗಾಯಿ ಮತ್ತು ಎನ್.ವಿ. ರಮಣ ಅವರಿದ್ದ ಪೀಠವು, ಈ ಕುರಿತಂತೆ ಕಠಿಣ ಕಾನೂನು ರೂಪಿಸುವಂತೆ ಸೂಚಿಸಿತು. ವಿಚಿತ್ರವೆಂದರೆ ದೇಶದಲ್ಲಿ ಎಲ್ಲೂ ವಾಣಿಜ್ಯಾತ್ಮಕ ಬಾಡಿಗೆ ತಾಯಿ ವ್ಯವಹಾರಕ್ಕೆ ಅವಕಾಶವಿಲ್ಲ. ಆದರೂ ನಡೆಯುತ್ತಿದೆ.

ಅದೂ ಬಾಡಿಗೆತಾಯಿ ಪ್ರವಾಸೋದ್ಯಮ ಎಂಬ ಹೆಸರನ್ನಿಟ್ಟುಕೊಂಡು ಈ ಉದ್ಯಮ ನಡೆಸಲಾಗುತ್ತಿದೆ ಎಂದಿತು. ಅಂಡಾಣು ಕೊಟ್ಟ ಮಹಿಳೆ ಮತ್ತು ಮಗುಹೊತ್ತ ಮಹಿಳೆಯರಲ್ಲಿ ಮಗುವಿನ  ನಿಜವಾದ ತಾಯಿ ಯಾರು? ಇವರಿಬ್ಬರೂ ಆ ಮಗುವಿನ ತಾಯಂದಿರೇ? ಈ ಬಗ್ಗೆ ಸ್ಪಷ್ಟಪಡಿಸಿ ಎಂದೂ ಕೇಂದ್ರಕ್ಕೆ ಸುಪ್ರೀಂ ಪ್ರಶ್ನಿಸಿತು. ಬಾಡಿಗೆ ತಾಯಿ ಪ್ರವಾಸೋದ್ಯಮ ನಿಯಂತ್ರಣಕ್ಕೆ ಹೊಸ ಕಾನೂನು ಬಂದರೆ ಎನ್‍ಆರ್‍ಐಗಳೂ ಕೂಡ ಭಾರತದಲ್ಲಿ ಬಾಡಿಗೆ  ತಾಯಿಯಿಂದ ಮಗು ಪಡೆಯುವುದು ಕಷ್ಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com