ಲೈಂಗಿಕ ಅಲ್ಪಸಂಖ್ಯಾತರ ರೂಪದ ದುರ್ಗಾದೇವಿ: ಕೊಲ್ಕೊತದಲ್ಲಿ ವಿಶೇಷ ಮೂರ್ತಿ

ದಸರಾ ಹಬ್ಬದ ಪ್ರಮುಖ ವಿಶೇಷತೆ ದುರ್ಗಾ ಪೂಜೆ. ದೇಶಾದ್ಯಂತ ನಾನಾ ರೂಪದಲ್ಲಿ ದುರ್ಗಾದೇವಿ ಮೂರ್ತಿ ಸೃಷ್ಟಿಸಲಾಗುತ್ತದೆ...
ತೃತೀಯ ಲಿಂಗಿ ರೂಪದ ದುರ್ಗಾದೇವಿ
ತೃತೀಯ ಲಿಂಗಿ ರೂಪದ ದುರ್ಗಾದೇವಿ

ಕೊಲ್ಕೊತಾ: ದಸರಾ ಹಬ್ಬದ ಪ್ರಮುಖ ವಿಶೇಷತೆ ದುರ್ಗಾ ಪೂಜೆ. ದೇಶಾದ್ಯಂತ ನಾನಾ ರೂಪದಲ್ಲಿ ದುರ್ಗಾದೇವಿ ಮೂರ್ತಿ ಸೃಷ್ಟಿಸಲಾಗುತ್ತದೆ. ಕೊಲ್ಕತ್ತಾದಲ್ಲಿ ಈ ಭಾರಿ ದುರ್ಗಾದೇವಿ ಮೂರ್ತಿಎಲ್ಲರ ಗಮನ ಸೆಳೆಯುತ್ತಿದೆ.

ವಿಭಿನ್ನ ಶೈಲಿಯ ದುರ್ಗಾದೇವಿ ವಿಗ್ರಹಗಳ ತಯಾರಿಕೆಯಲ್ಲಿ ಕೊಲ್ಕೊತಾ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ಕೊಲ್ಕತ್ತಾದ ಜಾಯ್ ಮಿತ್ರಾ ಸ್ಟ್ರೀಟ್ ನಲ್ಲಿ ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಸದಸ್ಯರು  ಲೈಂಗಿಕ ಅಲ್ಪಸಂಖ್ಯಾತರ ರೂಪದಲ್ಲಿ ದುರ್ಗಾ ದೇವಿ ಮೂರ್ತಿಯನ್ನು ತಯಾರು ಮಾಡಿದ್ದಾರೆ.  ಇದು ಭಾರತದ ಮೊದಲ ವಿಶೇಷ ದುರ್ಗಾದೇವಿ ವಿಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೊಲ್ಕೊತಾದ ಹಲವಾರು ಲೈಂಗಿಕ ಅಲ್ಪಸಂಖ್ಯಾತರು ಸೇರಿ ದುರ್ಗಾದೇವಿಗೆ ತಮ್ಮದೇ ರೂಪ ಕೊಟ್ಟು ದೇವಿಯ ಮೂರ್ತಿಯಲ್ಲಿ ತಮ್ಮನ್ನು ಕಂಡುಕೊಂಡಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಕುರಿತಾಗಿ 'ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಸಾಕಷ್ಟು ಪೂರ್ವಾಗ್ರಹಗಳು ಬೆಳೆದಿದೆ. ಇದನ್ನುಹೋಗಲಾಡಿಸುವ ಪಣತೊಟ್ಟ ನಾವು ದುರ್ಗಾದೇವಿಗೆ ಈ ರೀತಿ ರೂಪ ಕೊಟ್ಟಿದ್ದೇವೆ.

ಜನರಲ್ಲಿ ತೃತೀಯ ಲಿಂಗಿಗಳ ಬಗ್ಗೆ ಬೆಳೆದಿರುವ ತಾತ್ಸಾರ ಮನೋಭಾವವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿದ್ದೇವೆ' ಎಂದು ಪ್ರತ್ಯಾಯ ಜೆಂಡರ್ ಟ್ರಸ್ಟ್ ನ ಸದಸ್ಯರು ಹೇಳುತ್ತಾರೆ. ಇನ್ನು ದುರ್ಗಾ ಪೂಜೆ ಆಚರಣೆಗೆ ಹಣಕ್ಕಾಗಿ ಫೇಸ್ ಬುಕ್ ನಲ್ಲಿ ನಿಧಿ ಸಂಗ್ರಹ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com