ಪಟಾಕಿ ಸಿಡಿಸುವ ಅವಧಿ ನಿಗದಿಗೊಳಿಸಿ: ಸುಪ್ರಿಂ ಮೇಟ್ಟಿಲೇರಿದ ಹಸುಗೂಸುಗಳು

ದೀಪಾವಳಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಅವಧಿಯನ್ನು ನಿಗದಿಗೊಳಿಸಬೇಕೆಂದು ಮೂರು ಮಕ್ಕಳು ಸುಪ್ರಿಂ ಕೋರ್ಟ್ ನಲ್ಲಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೀಪಾವಳಿ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಅವಧಿಯನ್ನು ನಿಗದಿಗೊಳಿಸಬೇಕೆಂದು ಮೂರು ಮಕ್ಕಳು ಸುಪ್ರಿಂ ಕೋರ್ಟ್ ನಲ್ಲಿ ಅಪೀಲು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವ ಸಮಯವನ್ನು ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆ ಅವಧಿಯವರೆಗೆ ನಿಗದಿ ಪಡಿಸುವ ಸಾಧ್ಯತೆ ಇದೆ.

ಆರು ತಿಂಗಳ ಅರ್ಜುನ್ ಗೋಪಾಲ್ ಮತ್ತು ಆರವ್ ಭಂಡಾರಿ, 14 ತಿಂಗಳ ಜೋಯಾ ರಾವ್ ಭಾಸಿನ್ ತಮ್ಮ ವಕೀಲ ತಂದೆಯರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಾವು ಚಿಕ್ಕ ಮಕ್ಕಳಾಗಿದ್ದು, ತಮ್ಮ ಶ್ವಾಸಕೋಶ ಇನ್ನೂ ಸರಿಯಾಗಿ ಬೆಳವಣಿಗೆಯಾಗದ ಕಾರಣ, ಪಟಾಕಿಯಿಂದ ಉಂಟಾಗುವ ಶಬ್ದ ಹಾಗೂ ವಾಯು ಮಾಲಿನ್ಯ ತಮ್ಮ ಮೇಲೆ ಭಾರಿ ಪ್ರಮಾಣದ ದುಷ್ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವ ಅವಧಿ ಕಡಿಮೆಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಇನ್ನು ಅರ್ಜಿ ಕೈಗೆತ್ತಿಕೊಂಡಿರುವ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್ ದತ್ತು, ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರಿಂಕೋರ್ಟ್ ಕೂಡಲೇ ಶಾಶ್ವತ ಪರಿಹಾರ ಸೂಚಿಸುವ ಅವಶ್ಯಕತೆಯಿದೆ ಎಂದು ಹೇಳಿದೆ. ಇನ್ನು ಈ ವೇಳೆ ಮಾತನಾಡಿದ ಹಿರಿಯ ವಕೀಲ ಕಪಿಲ್ ಸಿಬಲ್ ಶೇ.40 ರಷ್ಟು ಮಕ್ಕಳು ವಾಯು ಮಾಲಿನ್ಯದಿಂದಾಗಿ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com