ಕಾಶಿನಾಥ್‌ರಿಂದ ಪ್ರಶಸ್ತಿ ವಾಪಸ್

ಪ್ರಶಸ್ತಿ ವಾಪ್ಸಿ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ಕನ್ನಡ ಸಂಶೋಧಕ ಮತ್ತು ಚಿಂತಕ ಎಂ.ಎಂ ಕಲಬುರ್ಗಿ ಅವರ ಹತ್ಯೆ ಮತ್ತು ದಾದ್ರಿ ದುರ್ಘಟನೆಯನ್ನು ಖಂಡಿಸಿ ಹಿಂದಿ ಕಾದಂಬರಿಕಾರ ಕಾಶಿನಾಥ್‌ಸಿಂಗ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ...
ಸಾಹಿತಿ ಕಾಶಿನಾಥ್ ಸಿಂಗ್ (ಸಂಗ್ರಹ ಚಿತ್ರ)
ಸಾಹಿತಿ ಕಾಶಿನಾಥ್ ಸಿಂಗ್ (ಸಂಗ್ರಹ ಚಿತ್ರ)

ವಾರಾಣಸಿ: ಪ್ರಶಸ್ತಿ ವಾಪ್ಸಿ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ. ಕನ್ನಡ ಸಂಶೋಧಕ ಮತ್ತು ಚಿಂತಕ ಎಂ.ಎಂ ಕಲಬುರ್ಗಿ ಅವರ ಹತ್ಯೆ ಮತ್ತು ದಾದ್ರಿ ದುರ್ಘಟನೆಯನ್ನು ಖಂಡಿಸಿ ಹಿಂದಿ ಕಾದಂಬರಿಕಾರ ಕಾಶಿನಾಥ್‌ಸಿಂಗ್ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದ್ದಾರೆ.

೨೦೧೧ರಲ್ಲಿ ರೆಹಾನ್ ಪರ್ ರಘ್ಘು ಎಂಬ ಕಾದಂಬರಿಗಾಗಿ ಕಾಶಿನಾಥ್ ಸಿಂಗ್ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಅವರ ಪ್ರಖ್ಯಾತ ಕೃತಿ ಕಾಶಿ ಕಾ ಅಸ್ಸಿ ಆಧರಿಸಿ ಮೊಹ ಅಸ್ಸಿ ಎಂಬ ಹಿಂದಿ ಚಿತ್ರವನ್ನೂ ಮಾಡಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದ್ದು, ಸಾಹಿತ್ಯಲೋಕದ ಪ್ರತಿಭಟನೆಯನ್ನೂ ರಾಜಕೀಯ ನಾಯಕರು ಸಹಿಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com