ರಿಜುಜಿ ಉತ್ತರ ಭಾರತ-ದಕ್ಷಿಣ ಭಾರತ, ಹಿಂದೂ-ಮುಸ್ಲಿಂ ಎಂದು ಭಾಗಿಸಬೇಡಿ: ಕೇಜ್ರಿವಾಲ್

ಉತ್ತರ ಭಾರತದ ಜನತೆ ಕಾನೂನು ಮುರಿಯುವುದರಲ್ಲಿ ಸಂತಸ ಕಾಣುತ್ತಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೆನ್ ರಿಜ್ಜು ಹೇಳಿಕೆಯನ್ನು ದೆಹಲಿ...
ಅರವಿಂದ್ ಕೇಜ್ರಿವಾಲ್, ಕಿರಣ್ ರಿಜಿಜು
ಅರವಿಂದ್ ಕೇಜ್ರಿವಾಲ್, ಕಿರಣ್ ರಿಜಿಜು

ನವದೆಹಲಿ: ಉತ್ತರ ಭಾರತದ ಜನತೆ ಕಾನೂನು ಮುರಿಯುವುದರಲ್ಲಿ ಸಂತಸ ಕಾಣುತ್ತಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೆನ್ ರಿಜ್ಜು ಹೇಳಿಕೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತೀವ್ರವಾಗಿ ಖಂಡಿಸಿದ್ದಾರೆ.

ರಿಜುಜಿ ಅವರೇ ಉತ್ತರ ಭಾರತ, ದಕ್ಷಿಣ ಭಾರತ. ಹಿಂದೂ-ಮುಸ್ಲಿಂ ಎಂದು ವಿಭಾಗಿಸಬೇಡಿ. ನಾವು ನಮ್ಮ ಸ್ವಭಾವವನ್ನು ಉತ್ತಮಗೊಳಿಸಿಕೊಳ್ಳಬೇಕಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ನಿನ್ನೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರೆನ್ ರಿಜ್ಜು ಅವರು ಉತ್ತರ ಭಾರತದ ಜನತೆ ಕಾನೂನು ಮುರಿಯುವುದರಲ್ಲಿ ಸಂತಸ ಕಾಣುತ್ತಾರೆ ಎಂದು ಹೇಳಿದ್ದರು. ಈ ಹೇಳಿಕೆ ಉತ್ತರ ಭಾರತದ ರಾಜಕೀಯ ವಲಯದಲ್ಲಿ ಕೋಲಾಹಲ ಮೂಡಿಸಿದೆ.

ಕೆಲ ವರ್ಷಗಳ ಹಿಂದೆ ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್‌ರೊಬ್ಬರು, ಉತ್ತರ ಭಾರತದ ಜನತೆ ಕಾನೂನು ಮುರಿಯುವುದರಲ್ಲಿ ಸಂತಸ ಅನುಭವಿಸುತ್ತಾರೆ. ಸಂಜೆಯ ವೇಳೆಗೆ ಕ್ಷಮೆ ಕೋರುವಂತೆ ಒತ್ತಡ ಹೇರುತ್ತಾರೆ ಎಂದು ನೀಡಿರುವ ಹೇಳಿಕೆಗೆ ನಾನೇ ಸಾಕ್ಷಿಯಾಗಿದ್ದೇನೆ ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com