ಈ ಗ್ರಾಮದಲ್ಲಿರುವ ಬಹುತೇಕ ಮಂದಿಗೆ ಕಿಡ್ನಿವೈಫಲ್ಯ!

ಕಳೆದೊಂದು ದಶಕಗಳಿಂದ ಇಲ್ಲಿನ ಗ್ರಾಮಸ್ಥರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ತಮಿಳ್ನಾಡಿನ ಕಚಿರಪಾಳಂನ ಕಲ್‌ವರಯಾನ್ ಹಿಲ್ಸ್...
ನೀರು ತರುತ್ತಿರುವ ಯುವತಿ (ಕೃಪೆ: ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ )
ನೀರು ತರುತ್ತಿರುವ ಯುವತಿ (ಕೃಪೆ: ದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ )
ವಿಲ್ಲುಪುರಂ:  ಕಳೆದೊಂದು ದಶಕಗಳಿಂದ ಇಲ್ಲಿನ ಗ್ರಾಮಸ್ಥರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ.  ತಮಿಳ್ನಾಡಿನ ಕಚಿರಪಾಳಂನ ಕಲ್‌ವರಯಾನ್ ಹಿಲ್ಸ್ ಬಳಿಯಲ್ಲಿರುವ ಪರಿಗಾಂ ಎಂಬ ಗ್ರಾಮದಲ್ಲಿ ಈ ಸಮಸ್ಯೆ ತಲೆದೋರಿದೆ. ಈ ಗ್ರಾಮದಲ್ಲೀಗ  2,500 ಕುಟುಂಬಗಳು ವಾಸಿಸುತ್ತಿವೆ. ಇದರಲ್ಲಿ 20 ಮಂದಿ ಕಿಡ್ನಿ ವೈಫಲ್ಯದಿಂದಲೇ ಸಾವಿಗೀಡಾಗಿದ್ದಾರೆ. ಇನ್ನುಳಿದ 200 ಮಂದಿಗೆ ಇಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ
2005ರಲ್ಲಿ ಚಿನ್ನತಂಬಿ (75) ಎಂಬವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೆನ್ನೈನಲ್ಲಿರುವ ರಾಜೀವ್ ಗಾಂಧಿ ಸರ್ಕಾರಿ ಹಾಸ್ಪಿಟಲ್‌ಗೆ ದಾಖಲು ಮಾಡಿದಾಗಲೇ ಗೊತ್ತಾಗಿದ್ದು, ಚಿನ್ನತಂಬಿಯವರ ಎರಡೂ ಕಿಡ್ನಿಗಳು ಕಾರ್ಯವೆಸಗುವುದನ್ನು ನಿಲ್ಲಿಸಿದೆ ಎಂದು. ಉತ್ತಮ ಚಿಕಿತ್ಸೆ ನೀಡಿದರೂ ಚಿನ್ನತಂಬಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ. ವರುಷಗಳು ಕಳೆದಂತೆ ಇಲ್ಲಿ ಇನ್ನೂ ಹೆಚ್ಚಿನ ಗ್ರಾಮಸ್ಥರಿಗೆ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿತು.
ಈ ಬಗ್ಗೆ  ಗಮನ ಹರಿಸಿದ್ದು ಗಜೇಂದ್ರನ್ ಎಂಬ ಸಾಮಾಜಿಕ ಕಾರ್ಯಕರ್ತ. ಈ ಗ್ರಾಮದ ಬಳಿಯಲ್ಲಿ 2000 ಇಸ್ವಿಯಿಂದ 2010ರ ವರೆಗೆ ಗ್ರಾನೈಟ್ ಕ್ವಾರಿಯೊಂದು ಇತ್ತು. ಈ ಕ್ವಾರಿಯಿಂದಾಗಿ ಸುತ್ತ ಮುತ್ತಲ ಪ್ರದೇಶದ ನೀರು ಮಲಿನಗೊಂಡಿತ್ತು. ಮಾತ್ರವಲ್ಲದೆ ಖಾಸಗಿ ಗುತ್ತಿಗೆದಾರರು ಕ್ವಾರಿಯಲ್ಲಿ ಹೆಚ್ಚು ತೀವ್ರತೆಯಿರುವ ಸ್ಫೋಟಕಗಳನ್ನು ಬಳಸಿಕೊಂಡಿದ್ದರು ಎಂದು ಗಜೇಂದ್ರನ್ ಹೇಳುತ್ತಾರೆ . 
2011ರಲ್ಲಿ ಮಾಜಿ ಪಂಚಾಯತ್ ಟಿ ಜಯಕುಮಾರ್ ಅವರನ್ನು ಭೇಟಿ ಮಾಡಿ ತಮಿಳ್ನಾಡು  ಜಲಸಂಪನ್ಮೂಲ ಸಮಿತಿಗೆ ನೀರಿನ ಸ್ಯಾಂಪಲ್ ಕಳಿಸಿಕೊಡಲಾಗಿತ್ತು. ಅದನ್ನು ಪರಿಶೀಲಿಸಿದ ಅವರು ನೀರಿನಲ್ಲಿ ಅಧಿಕ ಪ್ರಮಾಣದಲ್ಲಿ ಉಪ್ಪು ಬೆರೆತುಕೊಂಡಿದೆ. ಇದು ಕುಡಿಯಲು ಯೋಗ್ಯ ಅಲ್ಲ ಎಂದು ಹೇಳಿದ್ದರು. ಆದರೆ ಇಲ್ಲಿನ ಗ್ರಾಮಸ್ಥರು ದುಡ್ಡು ಕೊಟ್ಟು ನೀರು ಖರೀದಿಸುವಷ್ಟು ಶಕ್ತರಲ್ಲದ ಕಾರಣ ಬಾವಿ, ಬೋರ್‌ವೆಲ್ ಗಳ ನೀರನ್ನೇ ಕುಡಿಯುತ್ತಿದ್ದಾರೆ. ಇದರಿಂದಾಗಿಯೇ ಕಿಡ್ನಿ ವೈಫಲ್ಯ ಕಾಣಿಸಿಕೊಳ್ಳುತ್ತಿದೆ.
ನೀರು ದೋಷಪೂರಿತವಾಗಿರುವುದರ ಬಗ್ಗೆ ಕಲ್ಲಕುರಿಚಿ ಆರ್‌ಡಿ ಒ ಅವರ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಪ್ರತಿನಿಧಿಗಳು ವಿಚಾರಿಸಿದಾಗ ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಅಂದಿದ್ದಾರೆ. ಆದರೆ ತಾವು ಈ ಬಗ್ಗೆ ಸುಮಾರು 200ಕ್ಕಿಂತಲೂ ಹೆಚ್ಚು ಬಾರಿ  ದೂರು ಸಲ್ಲಿಸಿದ್ದೇವೆ. ಆರ್‌ಡಿಒ, ಬಿಡಿಒ ಮತ್ತು ಜಿಲ್ಲಾಧಿಕಾರಿಗಳು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಊರಿನ ಜನರು ಹೇಳುತ್ತಿದ್ದಾರೆ.,
ಈ ವಿಷಯಕ್ಕೆ ಸಂಬಂಧಿಸಿದಂತೆ ನವೆಂಬರ್ 2ರಂದು ಗ್ರಾಮಸ್ಥರು ಕಲ್ಲಕುರಿಚಿ ಆರ್‌ಡಿಒ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ಗ್ರಾಮದ ಮುಖ್ಯಸ್ಥರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com