ನೃತ್ಯ ತಂಡಕ್ಕೆ ಸಿಎಂ ಪರಿಹಾರ ನಿಧಿಯಿಂದ ಹಣ: 'ಮಹಾ' ಸರ್ಕಾರದ ವಿರುದ್ಧ ವಿಪಕ್ಷಗಳ ಆಕ್ರೋಶ

ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.
ದೇವೇಂದ್ರ ಫಡ್ನವೀಸ್
ದೇವೇಂದ್ರ ಫಡ್ನವೀಸ್

ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತೊಮ್ಮೆ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಥಾಯ್ ಲ್ಯಾಂಡ್ ಗೆ ತೆರಳಲು ನೃತ್ಯ ತಂಡಕ್ಕೆ ಹಣ ಮಂಜೂರು ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. 
ಥಾಯ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ನೃತ್ಯ ಸ್ಪರ್ಧೆಯಲ್ಲಿ ಸರ್ಕಾರಿ ನೌಕರರ ನೃತ್ಯ ತಂಡ ಭಾಗವಹಿಸುತ್ತಿದ್ದು ನೃತ್ಯ ತಂಡಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 8 ಲಕ್ಷ ರೂಪಾಯಿ ಮಂಜೂರು ಮಾಡಿದ್ದಾರೆ. ಮುಖ್ಯಮಂತ್ರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು ಮಹಾರಾಷ್ಟ್ರದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದರೂ ದೇವೇಂದ್ರ ಫಡ್ನವೀಸ್ ನೃತ್ಯ ತಂಡಕ್ಕೆ 8 ಲಕ್ಷ ನೀಡಿರುವುದು ಸರ್ಕಾರದ ಆದ್ಯತೆಗಳು ಬದಲಾಗಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ವಾಗ್ದಾಳಿ ನಡೆಸಿವೆ.
ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿಗಳ ಕಾರ್ಯಾಲಯದ ಅಧಿಕಾರಿಗಳು, ನೃತ್ಯ ತಂಡಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ನೀಡಿರುವುದು ಅಪರಾಧವಲ್ಲ ಎಂದು ಹೇಳಿದ್ದಾರೆ. ಆರ್.ಟಿ.ಐ ಕಾರ್ಯಕರ್ತ ಅನಿಲ್ ಗಲಗ್ಲಿ ಅವರು ಮಾಹಿತಿ ಹಕ್ಕಿನಡಿ ನೃತ್ಯ ತಂಡಕ್ಕೆ ದೇವೇಂದ್ರ ಫಡ್ನವೀಸ್ ಪರಿಹಾರ ನಿಧಿಯಿಂದ ಹಣ ನೀಡಿರುವುದನ್ನು ಬಹಿರಂಗಪಡಿಸಿದ್ದಾರೆ.
ರಾಜ್ಯದಲ್ಲಿ ಬರಗಾಲ ಎದುರಾಗಿದ್ದರೂ ನೃತ್ಯ ತಂಡಕ್ಕೆ ಪರಿಹಾರ ನಿಧಿಯಿಂದ ಹಣ ನಿಡುವ ಅನಿವಾರ್ಯತೆಯನ್ನು ಕಾಂಗ್ರೆಸ್ ಹಾಗೂ ಎನ್.ಸಿ.ಪಿ, ಕೂಡಲೇ ಹಣವನ್ನು ವಾಪಸ್ ಪಡೆಯಬೇಕು, ಅದು  ಸಾಧ್ಯವಾಗದೇ ಇದ್ದಲ್ಲಿ  ದೇವೆಂದ್ರ ಫಡ್ನವೀಸ್ ತಮ್ಮ ಸ್ವಂತ ಹಣವನ್ನು ನೃತ್ಯ ತಂಡಕ್ಕೆ ನೀಡಲಿ ಎಂದು ಒತ್ತಾಯಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com