ಪೋಸ್ಟ್ ಮ್ಯಾನ್ ಗಳಿಂದ ಬ್ಯಾಂಕಿಂಗ್ ಬಗ್ಗೆ ಪಾಠ

ಸರ್ಕಾರಿ ಪ್ರಾಯೋಜಿತ ಹಣಕಾಸು ಯೋಜನೆಗಳು ಮತ್ತು ಬ್ಯಾಂಕಿಂಗ್ ವಹಿವಾಟಿನ ಕುರಿತು ಗ್ರಾಮೀಣ ಜನರಿಗೆ ಪಾಠ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಸರ್ಕಾರಿ ಪ್ರಾಯೋಜಿತ ಹಣಕಾಸು ಯೋಜನೆಗಳು ಮತ್ತು ಬ್ಯಾಂಕಿಂಗ್ ವಹಿವಾಟಿನ ಕುರಿತು ಗ್ರಾಮೀಣ ಜನರಿಗೆ ಪಾಠ ಮಾಡಲು ಪೋಸ್ಟ್ ಮ್ಯಾನ್ ಗಳನ್ನು ಬಳಕೆ ಮಾಡಿಕೊಳ್ಳುವತ್ತ ಕೇಂದ್ರ  ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 
ಈ ಕುರಿತು ಸಂರಚನಾ ಕಾರ್ಯಕ್ರಮವೊಂದನ್ನು ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಹಣಕಾಸು ಸಚಿವಾಲಯ ನಿರತವಾಗಿದೆ. ಈ ಯೋಜನೆಯಡಿ  ಪೋಸ್ಟ್ ಮ್ಯಾನ್ ಗಳನ್ನು ಬಳಕೆ ಮಾಡಿಕೊಳ್ಳಳು ಬ್ಯಾಂಕ್ ಗಳು ಶುಲ್ಕ ಪಾವತಿಸಬೇಕಾಗಿದೆ. 
ಅಂಚೆ ಕಚೇರಿಗಳನ್ನು ಹಣಕಾಸು ವಹಿವಾಟು ಮಾಹಿತಿ ಕೇಂದ್ರಗಳಾಗಿ ರೂಪಿಸುವುದು ಈ ಯೋಜನೆ ಹಿಂದಿನ ಉದ್ದೇಶವಾಗಿದೆ. ಬ್ಯಾಂಕಿಂಗ್ ವಹಿವಾಟಿಗೆ ಸಂಬಂಧಿಸಿದಂತೆ ಬ್ಯಾಂಕ್‍ಗಳು ಪೋಸ್ಟ್‍ಮಾ್ಯನ್ ಗಳಿಗೆ ತರಬೇತಿ ಕಾರ್ಯಕ್ರಮ ನಡೆಸಲಿದ್ದು ಆಯ್ದ ಅಂಚೆ ಇಲಾಖೆ ಸಿಬ್ಬಂದಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಂಚೆ ಇಲಾಖೆಯ ಬ್ಯಾಂಕಿಂಗ್ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಸದಸ್ಯರಾದ ಎಂ. ಎಸ್.ರಾಮಾನುಜಂ ಹೇಳಿದ್ದಾರೆ. 
ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬ್ಯಾಂಕಿಂಗ್ ಪರವಾನಗಿ ನೀಡಿದ ಹನ್ನೊಂದು ಸಂಸ್ಥೆಗಳಲ್ಲಿ ಅಂಚೆ ಇಲಾಖೆಯೂ ಸೇರಿದೆ. ಇಂಡಿಯನ್‍ಪೋಸ್ಟ್ ಪೇಮೆಂಟ್ ಬ್ಯಾಂಕ್ ಹೆಸರಿನಲ್ಲಿ ಕಾರ್ಯಾಚರಣೆ ಅರಂಭಿಸಲಿದ್ದು ಆರಂಭಿಕ ಬಂಡವಾಳ ರು.300 ಕೋಟಿ ಇದೆ. 
ಅಂಚೆ ಇಲಾಖೆಯ ಎಲ್ಲ ನೆಟ್  ವರ್ಕ್ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಅಂಚೆ ಇಲಾಖೆಯಿಂದ ಸೇವೆಗಳನ್ನು ಪಡೆಯಲು ಬ್ಯಾಂಕ್ ಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸಣ್ಣ ಪ್ರಮಾಣದ ಶುಲ್ಕ ಪಾವತಿಸ ಬೇಕು. ಈ ಕಾರ್ಯಾಚರಣೆಯನ್ನು ಅಂತಿಮಗೊಳಿಸುತ್ತಿರುವುದಾಗಿ ರಾಮಾನುಜಂ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com