ದ್ವೇಷದ ಅಪರಾಧಗಳಿಗೆ ಕೋರ್ಟ್ ಕಠಿಣ ಶಿಕ್ಷೆ ನೀಡುತ್ತೆ: ನ್ಯಾ.ಎಚ್.ಎಲ್ ದತ್ತು

ದೇಶದಲ್ಲಿ ದ್ವೇಷ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಅಂಥಹ ಅಪರಾಧಿಗಳ ವಿರುದ್ಧ ನ್ಯಾಯಾಲಯ ನಿಷ್ಠುರವಾಗಿ ತೀರ್ಪು ನೀಡುತ್ತದೆ,
ಎಚ್.ಎಲ್ ದತ್ತು
ಎಚ್.ಎಲ್ ದತ್ತು

ನವದೆಹಲಿ; ದೇಶದಲ್ಲಿ ದ್ವೇಷ ಸಂಬಂಧಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದೂ, ಅಂಥಹ ಪ್ರಕರಣಗಳ ವಿರುದ್ಧ ನ್ಯಾಯಾಲಯ ನಿಷ್ಠುರವಾಗಿ ತೀರ್ಪು ನೀಡುತ್ತದೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ.

ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನಲ್ಲಿ ನ್ಯಾಯಮೂರ್ತಿ ದತ್ತು ಅವರು,  ಕಾನೂನೇ ಸರ್ವೋಚ್ಚವಾಗಿರುವ ಭಾರತದಲ್ಲಿ ಕಾನೂನಿಗೆ ಗರಿಷ್ಠ ಪ್ರಾಧಾನ್ಯವಿದೆ. ಅಂತೆಯೇ ಕಾನೂನಿನ ಆಡಳಿತವನ್ನು ಎತ್ತಿ ಹಿಡಿಯಲು ನ್ಯಾಯಾಲಯಗಳು ತಮ್ಮಿಂದ ಸಾಧ್ಯವಿರುವ ಎಲ್ಲ ಯತ್ನಗಳನ್ನು ಮಾಡುತ್ತಿವೆ. ಅಸಹಿಷ್ಣುತೆಯ ದ್ವೇಷಾಪರಾಧಗಳಿಗೆ ನ್ಯಾಯಾಲಯಗಳು ಕಠಿಣ ಶಿಕ್ಷೆ ನೀಡಲಿವೆ ಎಂದು ತಿಳಿಸಿದ್ದಾರೆ.

ವಿಭಜಕ ಶಕ್ತಿಗಳಿಂದ ಪ್ರಜೆಗಳನ್ನು ರಕ್ಷಿಸುವ ಮೂಲಭೂತ ಕರ್ತವ್ಯ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿರುವ ಸರಕಾರದ್ದಾಗಿರುತ್ತದೆ ಎಂದು ಹೇಳಿದ ದತ್ತು, ಕಾನೂನಿನ ಚೌಕಟ್ಟಿನಲ್ಲಿ ದೇಶದ ಪ್ರಜೆಗಳು ತಮ್ಮ ಮೂಲಭೂತ ಹಕ್ಕುಗಳನ್ನು ಅನುಭವಿಸಲು ತಾವು ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com