
ಚೆನ್ನೈ: ಮಕ್ಕಳ ಮೇಲೆ ಅತ್ಯಾಚಾರ ನಡೆಸುವವರಿಗೆ ನೀಡುತ್ತಿರುವ ಶಿಕ್ಷೆ ಪರಿಣಾಮಕಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್, ಅತ್ಯಾಚಾರಿಗಳಿಗೆ ಪುರುಷತ್ವ ಹರಣ ಮಾಡುವ ಶಿಕ್ಷೆಯ ವಿಧಾನವನ್ನು ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.
ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ, ಪ್ರಸ್ತುತ ನಿಡುತ್ತಿರುವ ಶಿಕ್ಷೆ ಪರಿಣಾಮಕಾರಿಯಾಗಿಲ್ಲ. ಬೇರೆ ದೇಶಗಳಲ್ಲಿ ಅತ್ಯಾಚಾರಿಗಳ ಪುರುಷತ್ವ ಹರಣ ಮಾಡುವ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ. ಈ ಶಿಕ್ಷೆಯ ವಿಧಾನವನ್ನು ಕೇಂದ್ರ ಸರ್ಕಾರವೂ ಪರಿಗಣಿಸಬೆಕಿದೆ.
ಬ್ರಿಟನ್ ಪ್ರಜೆಯೋರ್ವ ತನ್ನ ವಿರುದ್ಧ ಕೇಳಿಬಂದಿರುವ ಅಪ್ರಾಪ್ತೆಯ ಮೇಲೆ ನಡೆಸಿರುವ ಅತ್ಯಾಚಾರ ಪ್ರಕರಣವನ್ನು ವಜಾಗೊಳಿಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿರುವ ಚೆನ್ನೈ ಹೈಕೋರ್ಟ್ ಈ ಸಲಹೆ ನೀಡಿದೆ.
"ಪುರುಷತ್ವ ಹರಣ ಘೋರ ಶಿಕ್ಷೆಯಂತೆ ಕಾಣುತ್ತದೆ ಆದರೆ ಘೋರ ಅಪರಾಧ ಮಾಡುವವರಿಗೆ ಘೋರ ಶಿಕ್ಷೆ ನೀಡುವುದೇ ಸರಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದನ್ನು ಮಾನವ ಹಕ್ಕುಗಳ ಕಾರಣ ನೀಡಿ ವಿರೋಧಿಸಲಾಗುತ್ತಿದೆ. ಮಾನವ ಹಕ್ಕು ಕಾರ್ಯಕರ್ತರು ಅಪರಾಧಿಗಳಿಗೆ ಬೆಂಬಲಿಸುತ್ತಿದ್ದಾರೆ. ಮಾನವ ಹಕ್ಕುಗಳಿರುವುದು ಅತ್ಯಾಚಾರ ಸಂತ್ರಸ್ತರಿಗೆ ಹೊರತು ಅತ್ಯಾಚಾರದ ಆರೋಪಿಗಳ ಪರ ಅಲ್ಲ ಎಂದು ಹೈಕೋರ್ಟ್ ಹೇಳಿದೆ.
Advertisement